ಸಿಡ್ನಿ (ಪಿಟಿಐ): ಭಾರತದ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಬುಧವಾರ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಈ ಕಾರಣ ಅವರ ಮೇಲೆ ಮ್ಯಾಚ್ ರೆಫರಿ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ. ಫೀಲ್ಡಿಂಗ್ ವೇಳೆ ಪ್ರೇಕ್ಷಕರು ಮೂದಲಿಸಿದ ಕಾರಣ ವಿರಾಟ್ ಈ ರೀತಿ ವರ್ತಿಸಿದ್ದಾರೆ. `ತಾಯಿ ಹಾಗೂ ಸಹೋದರಿ ಬಗ್ಗೆ ಪ್ರೇಕ್ಷಕರು ಕೆಟ್ಟದಾಗಿ ಮಾತನಾಡಿದರು. ಇದನ್ನು ಹೇಗೆ ಸಹಿಸಿಕೊಳ್ಳುವುದು~ ಎಂದು ಅವರೇ ಟ್ವಿಟರ್ನಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.