ADVERTISEMENT

ಕ್ರಿಕೆಟ್ ಟೆಸ್ಟ್: ಭಾರತ ಎ ತಂಡದ ಮೇಲುಗೈ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಲಿಂಕನ್, ನ್ಯೂಜಿಲೆಂಡ್ (ಪಿಟಿಐ): ಭಾರತ `ಎ~ ತಂಡದವರು ನ್ಯೂಜಿಲೆಂಡ್ `ಎ~ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಅಭಿನವ್ ಮುಕುಂದ್ ನೇತೃತ್ವದ ಭಾರತ 118 ಓವರ್‌ಗಳಲ್ಲಿ 8 ವಿಕೆಟ್‌ಗೆ 554 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆತಿಥೇಯ ತಂಡ ಎರಡನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ 48.1 ಓವರ್‌ಗಳಲ್ಲಿ 5 ವಿಕೆಟ್‌ಗೆ 198 ರನ್ ಗಳಿಸಿತ್ತು. ಆರ್. ವಿನಯ್ ಕುಮಾರ್ (36ಕ್ಕೆ 2) ಮತ್ತು ಭುವನೇಶ್ವರ್ ಕುಮಾರ್ (57ಕ್ಕೆ 2) ಅವರು ಎದುರಾಳಿ ತಂಡದ ಕುಸಿತಕ್ಕೆ ಕಾರಣರಾದರು.

ಇದಕ್ಕೂ ಮುನ್ನ 4 ವಿಕೆಟ್‌ಗೆ 433 ರನ್‌ಳಿಂದ ದಿನದಾಟ ಮುಂದುವರಿಸಿದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಆದರೆ ಮೊದಲ ದಿನ ಔಟಾಗದೆ ಉಳಿದಿದ್ದ ಮನ್‌ದೀಪ್ ಸಿಂಗ್ (193) ಮತ್ತು ಅಶೋಕ್ ಮೆನೇರಿಯಾ (173) ದ್ವಿಶತಕ ಗಳಿಸಲು ವಿಫಲರಾದರು. ವಿನಯ್ ಕುಮಾರ್ 41 ಎಸೆತಗಳಲ್ಲಿ 50 ರನ್ (5 ಬೌಂ, 3 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್: ಭಾರತ `ಎ~: ಮೊದಲ ಇನಿಂಗ್ಸ್ 118 ಓವರ್‌ಗಳಲ್ಲಿ 8 ವಿಕೆಟ್‌ಗೆ 554 (ಮನ್‌ದೀಪ್ ಸಿಂಗ್ 193, ಅಶೋಕ್ ಮೆನೇರಿಯಾ 173, ಆರ್. ವಿನಯ್ ಕುಮಾರ್ ಔಟಾಗದೆ 50, ಬ್ರೆಂಟ್ ಅರ್ನೆಲ್ 94ಕ್ಕೆ 3). ನ್ಯೂಜಿಲೆಂಡ್ `ಎ~: ಮೊದಲ ಇನಿಂಗ್ಸ್ 48.1 ಓವರ್‌ಗಳಲ್ಲಿ 5 ವಿಕೆಟ್‌ಗೆ 198 (ಹಾಮಿಷ್ ರುದರ್‌ಫರ್ಡ್ 99, ರೀಸ್ ಯಂಗ್ 22, ವಿನಯ್ ಕುಮಾರ್ 36ಕ್ಕೆ 5, ಭುವನೇಶ್ವರ್ ಕುಮಾರ್ 57ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.