ADVERTISEMENT

ಕ್ರಿಕೆಟ್: ದಕ್ಷಿಣ ವಲಯಕ್ಕೆ ಇನಿಂಗ್ಸ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 16:30 IST
Last Updated 4 ಫೆಬ್ರುವರಿ 2011, 16:30 IST


ವಿಶಾಖಪಟ್ಟಣ: ದಕ್ಷಿಣ ವಲಯ ತಂಡದ ವರು ಇಲ್ಲಿ ನಡೆಯುತ್ತಿರುವ ದುಲೀಫ್ ಟ್ರೋಫಿ ಫೈನಲ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಉತ್ತರ ವಲಯ ದ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.

ದಕ್ಷಿಣ ವಲಯ ಮೊದಲ ಇನಿಂಗ್ಸ್ ನಲ್ಲಿ 132.2 ಓವರ್‌ಗಳಲ್ಲಿ 477 ರನ್ ಗಳಿಸಿ ಆಲ್‌ಔಟ್ ಆಯಿತು. ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಉತ್ತರ ವಲಯ ಶುಕ್ರವಾರದ ದಿನದಂತ್ಯಕ್ಕೆ 23 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 50 ರನ್ ಕಲೆ ಹಾಕಿದೆ.

ಸಂಕ್ಷಿಪ್ತ ಸ್ಕೋರ್: ಉತ್ತರ ವಲಯ ಮೊದಲ ಇನಿಂಗ್ಸ್ 337 ಮತ್ತು ಎರಡನೇ ಇನಿಂಗ್ಸ್ 23 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 50. (ನಿತಿನ್ ಸೈನಿ ಬ್ಯಾಟಿಂಗ್ 21, ಪ್ರಗ್ಯಾನ್ ಓಜಾ 21ಕ್ಕೆ1). ದಕ್ಷಿಣ ವಲಯ ಮೊದಲ ಇನಿಂಗ್ಸ್‌ನಲ್ಲಿ 132.2 ಓವರ್‌ಗಳಲ್ಲಿ 477. (ಬದರೀನಾಥ್ 136, ಅಭಿಮನ್ಯು ಮಿಥುನ್ 26, ಜೋಗಿಂದರ್ ಶರ್ಮಾ 66ಕ್ಕೆ3, ಇಶಾಂತ್ ಶರ್ಮ 99ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.