ADVERTISEMENT

ಟೇಬಲ್ ಟೆನಿಸ್: ನವನೀತ್, ಐಶ್ವರ್ಯಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST
ಟೇಬಲ್ ಟೆನಿಸ್: ನವನೀತ್, ಐಶ್ವರ್ಯಗೆ ಪ್ರಶಸ್ತಿ
ಟೇಬಲ್ ಟೆನಿಸ್: ನವನೀತ್, ಐಶ್ವರ್ಯಗೆ ಪ್ರಶಸ್ತಿ   

ಬೆಂಗಳೂರು: ಎ.ಆರ್. ನವನೀತ್ ಮತ್ತು ಐಶ್ವರ್ಯ ಆರ್ ಬಿದರಿ ಇಲ್ಲಿ ನಡೆದ ಜಯನಗರ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದ ಟಿವಿಎಸ್ ವೇಗೊ ರಾಜ್ಯ ರ‌್ಯಾಂಕಿಂಗ್ ಟಿಟಿ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.

ಮಂಗಳವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ನವನೀತ್ 11-5, 11-7, 11-8, 11-9 ರಲ್ಲಿ ಆದಿತ್ಯ ಮಹಗಾಂವ್ಕರ್ ವಿರುದ್ಧ ಜಯ ಸಾಧಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದ    ಫೈನಲ್‌ನಲ್ಲಿ ಐಶ್ವರ್ಯ 9-11, 11-4, 11-6, 11-8, 11-6 ರಲ್ಲಿ ಭಾವನಾ ಎಚ್. ಅವರನ್ನು ಮಣಿಸಿದರು.

ಸೆಮಿಫೈನಲ್ ಪಂದ್ಯದಲ್ಲಿ ಐಶ್ವರ್ಯ 7-11, 6-11, 11-8, 11-8, 11-9, 4-11, 11-4 ರಲ್ಲಿ ಆರ್. ರಕ್ಷಾ ಎದುರು ಪ್ರಯಾಸದ ಜಯ ಪಡೆದಿದ್ದರು.

ಡಿ. ಸೂರಜ್ `ನಾನ್‌ಮೆಡಲಿಸ್ಟ್~ ವಿಭಾಗದ ಫೈನಲ್‌ನಲ್ಲಿ 11-8, 15-13, 6-11, 12-10 ರಲ್ಲಿ ಚೇತನ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ವೈ. ದಿನೇಶ್ ರಾವ್- ದಿನಕರ್ ನಾಯ್ಡು 12-10, 11-5, 11-4 ರಲ್ಲಿ ಆದಿತ್ಯ ಎಸ್. ರಾಜ್- ಜಿ. ಸುದೀಪ್ ಅವರನ್ನು ಸೋಲಿಸಿದರು.

ತಂಡ ವಿಭಾಗದ ಫೈನಲ್‌ನಲ್ಲಿ ಸೌತ್ ವೆಸ್ಟರ್ನ್ ರೈಲ್ವೆ `ಎ~ ತಂಡ 3-1 ರಲ್ಲಿ ಹೊರೈಜನ್ ವಿರುದ್ಧ ಜಯ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.