ADVERTISEMENT

ನೀಗುವುದೇ ಪದಕದ ಬರ?

ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 22:50 IST
Last Updated 17 ಆಗಸ್ಟ್ 2016, 22:50 IST
ಪ್ರಜಾವಾಣಿ ಚಿತ್ರ: ಕೆ.ಎನ್.ಶಾಂತಕುಮಾರ್
ಪ್ರಜಾವಾಣಿ ಚಿತ್ರ: ಕೆ.ಎನ್.ಶಾಂತಕುಮಾರ್   

ರಿಯೊ ಒಲಿಂಪಿಕ್ಸ್ ಆರಂಭವಾಗಿ 12 ದಿನ ಕಳೆದರೂ ಭಾರತ ಒಂದೂ ಪದಕ ಜಯಿಸಿಲ್ಲ. ಕೂಟ ಮುಗಿಯಲು ನಾಲ್ಕು ದಿನಗಳಷ್ಟೇ ಬಾಕಿ ಇರುವಾಗ ಸಿಂಧು ಪದಕದ ಭರವಸೆ ಮೂಡಿಸಿದ್ದಾರೆ.

ಪಿ.ವಿ. ಸಿಂಧು ಮಹಿಳಾ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌  ಹಣಾಹಣಿಯಲ್ಲಿ ಹೈದರಾಬಾದ್‌ನ ಸಿಂಧು ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದ ಯಿಹಾನ್‌ ವಾಂಗ್ ಎದುರು ಗೆದ್ದರು.

ಸೆಮಿಫೈನಲ್‌: ಗುರುವಾರ. ಸಂಜೆ 5.50.  ಎದುರಾಳಿ: ಜಪಾನ್‌ನ ನೊಜೊಮಿ  ಒಕುಹರ

ಕ್ವಾರ್ಟರ್ ಫೈನಲ್‌ ವಿವರ: 22–20, 21–19

ಸಿಂಧು ದಾಖಲೆಗಳು
2013
-ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು  ಗೆದ್ದ ಭಾರತದ ಮೊದಲ ಆಟಗಾರ್ತಿ. 

2014
-ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಏಕೈಕ  ಆಟಗಾರ್ತಿ

ಸಾಧನೆಗಳು
* 2014 ಮತ್ತು 2016ರಲ್ಲಿ ಊಬರ್‌ ಕಪ್‌ ತಂಡ ವಿಭಾಗದಲ್ಲಿ ಕಂಚು
* 2014ರ ಏಷ್ಯನ್‌ ಕೂಟದಲ್ಲಿ ಕಂಚು
* 2014ರ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚು
* 2016ರ ಸೌತ್ ಏಷ್ಯನ್‌ ಕೂಟ: ಸಿಂಗಲ್ಸ್‌ನಲ್ಲಿ ಬೆಳ್ಳಿ. ತಂಡ ವಿಭಾಗದಲ್ಲಿ ಚಿನ್ನ.
* 2011: ಏಷ್ಯನ್‌ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚು
* 2012: ಏಷ್ಯನ್‌ ಜೂನಿಯರ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಿನ್ನ
* 2011: ಕಾಮನ್‌ವೆಲ್ತ್‌ ಯೂತ್ ಗೇಮ್ಸ್‌ನ ಸಿಂಗಲ್ಸ್‌ನಲ್ಲಿ ಚಿನ್ನ
* 2011: ಇಂಡೊನೇಷ್ಯಾ ಇಂಟರ್ ನ್ಯಾಷನಲ್‌
* 2013ಮತ್ತು 16: ಮಲೇಷ್ಯಾ ಮಾಸ್ಟರ್ಸ್‌
* 2013,14,15: ಮಕಾವ್‌ ಓಪನ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.