ADVERTISEMENT

ಫಾರ್ಮುಲಾ ಒನ್: ಸುಟಿಲ್‌ಗೆ 8ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಮಾಂಟ್ರಿಯಲ್ (ಪಿಟಿಐ): ಪೋರ್ಸ್ ಇಂಡಿಯಾದ ಅಡ್ರಿಯಾನ್ ಸುಟಿಲ್ ಇಲ್ಲಿ ಭಾನುವಾರ ನಡೆದ ಫಾರ್ಮುಲಾ ಒನ್ ಕೆನಡಾ ಗ್ರ್ಯಾನ್ ಪ್ರಿ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಎಂಟನೇ ಸ್ಥಾನ ಪಡೆದರು. ಆದರೆ, ತಾಂತ್ರಿಕ ಸಮಸ್ಯೆಯಿಂದ ಪರದಾಡಿದ ಪಾಲ್ ಡಿ ರೆಸ್ಟಾ 14ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಪೋರ್ಸ್ ಇಂಡಿಯಾ ಅಭ್ಯಾಸದ ವೇಳೆಯಲ್ಲಿ ಉತ್ತಮ ಪ್ರದರ್ಶನ ತೋರಿತ್ತು.

`ಇದು ಅತ್ಯಂತ ಕಠಿಣ ಅರ್ಹತಾ ಸುತ್ತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಪ್ರಮುಖ ಸವಾಲಾಗಿತ್ತು. ಕೆಲ ಟ್ರ್ಯಾಕ್‌ಗಳು ಒದ್ದೆಯಾಗಿದ್ದವು. ಈ ರೀತಿಯ ಸ್ಥಳದಲ್ಲಿ ಪ್ರದರ್ಶನ ತೋರಲು ಸಾಕಷ್ಟು ಪ್ರಯಾಸ ಪಡಬೇಕಾಯಿತು' ಎಂದು ಸುಟಿಲ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.