ADVERTISEMENT

ಮಹೀಂದ್ರಾ ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಟೂರ್ನಿ: ವಿಎನ್‌ಎಸ್‌ಸಿಗೆ ಮಣಿದ ಡಿಆರ್‌ಡಿಒ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಪೃಥ್ವಿ (14 ಪಾಯಿಂಟ್) ಅವರ ಪ್ರಭಾವಿ ಆಟದ ನೆರವಿನಿಂದ ವಿ.ಎನ್.ಎಸ್.ಸಿ. ತಂಡದವರು ಇಲ್ಲಿ ನಡೆಯುತ್ತಿರುವ ಮಹೀಂದ್ರಾ ಎನ್‌ಬಿಎ ಚಾಲೆಂಜ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ 18 ವರ್ಷದೊಳಗಿನವರ ವಿಭಾಗದಲ್ಲಿ ಗೆಲುವು ಪಡೆದರು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಿಎನ್‌ಎಸ್‌ಸಿ ತಂಡ 38-31ಪಾಯಿಂಟ್‌ಗಳಿಂದ ಡಿಆರ್‌ಡಿಒ ತಂಡವನ್ನು ಸೋಲಿಸಿತು. ವಿಜಯಿ ತಂಡ ವಿರಾಮದ ವೇಳೆಗೆ 22-14ರಲ್ಲಿ ಮುನ್ನಡೆಯಲ್ಲಿತ್ತು. ನಂತರ ಪಾಯಿಂಟ್‌ಗಳ ಸಂಖ್ಯೆ ಹೆಚ್ಚಿಸಿಕೊಂಡಿತು. ಪೃಥ್ವಿ ಗಮನ ಸೆಳೆಯುವ ಆಟವಾಡಿದರು.

ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಹಲಸೂರು ಸ್ಪೋರ್ಟ್ಸ್ ಯುನಿಯನ್ 44-25ರಲ್ಲಿ (21-19) ಸಿಟಿ ಜಂಪ್‌ಬಾಲ್ ಕ್ಲಬ್ ತಂಡವನ್ನು ಸೋಲಿಸಿತು. ವಿಜಯಿ ತಂಡದ ಸೋಹನ್ 14 ಪಾಯಿಂಟ್ ಗಳಿಸಿ ಗಮನ ಸೆಳೆದರು.

13 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಐ.ಬಿ.ಬಿ.ಸಿ. 25-23ರಲ್ಲಿ ವಿವೇಕ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮೇಲೂ, ಬೀಗಲ್ಸ್ 25-11ರಲ್ಲಿ ಗ್ರೀನ್ಸ್ ತಂಡದ ವಿರುದ್ಧವೂ ಗೆಲುವು ಪಡೆಯಿತು. 18 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಮೌಂಟ್ ಕ್ಲಬ್ 44-14ರಲ್ಲಿ ಐ.ಬಿ.ಬಿ.ಸಿ. ಕ್ಲಬ್ ತಂಡವನ್ನು ಮಣಿಸಿತು. ಮೌಂಟ್ ಕ್ಲಬ್ ವಿರಾಮದ ವೇಳೆಗೆ 20-06ರಲ್ಲಿ ಮುನ್ನಡೆಯಲ್ಲಿತ್ತು.

ಪುರುಷರ ಸೀನಿಯರ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡ 63-52ರಲ್ಲಿ ಕೋಲಾರದ ಕನಕ ತಂಡದ ಮೇಲೂ, ಎಎಸ್‌ಸಿ ತಂಡ 78-76ರಲ್ಲಿ ಕೋರಮಂಗಲ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡದ ವಿರುದ್ಧವೂ ಗೆಲುವು ಪಡೆಯಿತು. ವಿರಾಮದ ವೇಳೆಗೆ ಎಎಸ್‌ಸಿ ತಂಡ 34-42ರಲ್ಲಿ ಹಿನ್ನಡೆಯಲ್ಲಿತ್ತು.
 
ಆದರೆ ವಿರಾಮದ ನಂತರ ಚುರುಕಿನ ಆಟವಾಡಿತು. ಐ.ಬಿ.ಬಿ.ಸಿ. 46-45ರಲ್ಲಿ ಜಯನಗರ ಸ್ಪೋರ್ಟ್ಸ್ ಕ್ಲಬ್ ತಂಡದ ಎದುರು ರೋಚಕ ಗೆಲುವು ಪಡೆಯಿತು. ವಿಜಯಿ ತಂಡ ವಿರಾಮದ ವೇಳೆಗೆ 21-29ರಲ್ಲಿ ಹಿನ್ನೆಡೆ ಹೊಂದಿತ್ತು.

ಇದೇ ವಿಭಾಗದ ಇನ್ನೊಂದು ಪಂದ್ಯಗಳಲ್ಲಿ ಭರತ್ ಸ್ಪೋರ್ಟ್ಸ್ ಕ್ಲಬ್ 71-65ರಲ್ಲಿ ಯಂಗ್ ಒರಿಯನ್ಸ್ ಕ್ಲಬ್ ಮೇಲೆ ಪ್ರಯಾಸದ ಜಯ ಸಾಧಿಸಿತು.

ಬಾಲಕರ 16 ವರ್ಷದೊಳಗಿನವರ ವಿಭಾಗದಲ್ಲಿ ಹಲಸೂರು ಸ್ಪೋರ್ಟ್ಸ್ ಯುನಿಯನ್ ತಂಡ 41-32ರಲ್ಲಿ ಸದರ್ನ್ ಬ್ಲ್ಯೂಸ್ ಮೇಲೂ, ವಿ.ಎನ್.ಎಸ್.ಸಿ. 40-38ರಲ್ಲಿ ಜಯನಗರ ಸ್ಪೋರ್ಟ್ಸ್ ಕ್ಲಬ್ ವಿರುದ್ಧವೂ, ಎನ್.ಜಿ.ವಿ. ಕ್ಲಬ್ 32-28ರಲ್ಲಿ ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಂಡದ ವಿರುದ್ಧವೂ ವಿಜಯ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.