ADVERTISEMENT

ಮೋದಿ ವಿರುದ್ಧ ಕೇರ್ನ್ಸ್ ದಾವೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಲಂಡನ್ (ಪಿಟಿಐ): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಕೇರ್ನ್ಸ್ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಲಂಡನ್‌ನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ (ಐಸಿಎಲ್) ಕೇರ್ನ್ಸ್ ಮೋಸದಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಮೋದಿ ಆರೋಪಿಸಿದ್ದರು. ಅದಕ್ಕೆ ಪ್ರತಿಯಾಗಿ ಅವರು ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮೋದಿ ಇಂತಹ ಆರೋಪ ಮಾಡಿದ ಕಾರಣ ನನ್ನ ವೃತ್ತಿಜೀವನಕ್ಕೆ ಕಳಂಕ ಉಂಟಾಗಿದೆ ಎಂಬುದು ಕೇರ್ನ್ಸ್ ಹೇಳಿಕೆ.

ಕೇರ್ನ್ಸ್ `ಮ್ಯಾಚ್ ಫಿಕ್ಸಿಂಗ್~ನಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಮೋದಿ `ಟ್ವಿಟರ್~ನಲ್ಲಿ ಬರೆದಿದ್ದರು. ಈ ಕಾರಣ ಅವರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಿಲ್ಲ ಎಂದಿದ್ದರು. ನಾಲ್ಕು ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು.

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗನೊಬ್ಬ ಭಾರತದ ಉದ್ಯಮಿಯ ವಿರುದ್ಧ ಲಂಡನ್ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಈ ಪ್ರಕರಣ `ಹಾಸ್ಯಾಸ್ಪದ~ ಎಂಬ ಟೀಕೆ ವ್ಯಕ್ತವಾಗಿದೆ. ಕೇರ್ನ್ಸ್ 2007-08 ರಲ್ಲಿ ಐಸಿಎಲ್‌ನಲ್ಲಿ ಚಂಡೀಗಡ ಲಯನ್ಸ್ ತಂಡ ಮುನ್ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.