ಬೆಂಗಳೂರು: ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎಸ್‌ಆರ್‌ಐಟಿ) ತಂಡದವರು ತುಮಕೂರಿನ ಎಸ್‌ಐಟಿ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ನಡೆದ ವಿಟಿಯು ಬೆಂಗಳೂರು ಉತ್ತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಫೈನಲ್ ಪಂದ್ಯದಲ್ಲಿ ಎಂಎಸ್‌ಆರ್‌ಐಟಿ ತಂಡ 78 ರನ್‌ಗಳಿಂದ ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಎಂಎಸ್‌ಆರ್‌ಐಟಿ 30 ಓವರ್‌ಗಳಲ್ಲಿ 8 ವಿಕೆಟ್‌ಗೆ 179 ರನ್ ಪೇರಿಸಿತು. ಮುರಾರಿ (38) ಮತ್ತು ನಿಶಾಂತ್ ಹೆಗ್ಡೆ (34) ಅವರು ತಂಡದ ಉತ್ತಮ ಮೊತ್ತಕ್ಕೆ ನೆರವಾದರು.
ಈ ಗುರಿಯನ್ನು ಬೆನ್ನಟ್ಟಿದ ಎಸ್‌ಜೆಸಿಐಟಿ ತಂಡ 24 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟಾಯಿತು. ದಬೀತ್ (6ಕ್ಕೆ 3) ಮತ್ತು ಅಂಕಿತ್ ವೋರಾ (25ಕ್ಕೆ 2) ಅವರು ಎಂಎಸ್‌ಆರ್‌ಐಟಿ ಪರ ಪ್ರಭಾವಿ ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.