ADVERTISEMENT

ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:51 IST
Last Updated 21 ಸೆಪ್ಟೆಂಬರ್ 2013, 19:51 IST

ಬೆಂಗಳೂರು: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನಗರ ಜಿಲ್ಲಾ ಪಂಚಾಯ್ತಿ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಆಶ್ರಯದಲ್ಲಿ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಹಾಗೂ ಮಹಿಳಾ (ಪೈಕಾ ) ಕ್ರೀಡಾಕೂಟ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಹಾಗೂ ಇನ್ನಿತರ ಮೈದಾನಗಳಲ್ಲಿ ಇದೇ 24ರಿಂದ 26ರ ವರೆಗೆ ನಡೆಯಲಿದೆ.

ಅಥ್ಲೆಟಿಕ್ಸ್‌ ಪುರುಷರು: 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 5000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್‌ ಜಂಪ್‌, ಗುಂಡು ಎಸೆತ, ಜಾವೆಲಿನ್‌ ಥ್ರೋ, ಡಿಸ್ಕಸ್‌ ಎಸೆತ, 110 ಮೀಟರ್‌ ಹರ್ಡಲ್ಸ್, 4x100 ಮೀಟರ್‌ ರಿಲೇ, 4x400 ಮೀಟರ್‌ ರಿಲೇ.

ಅಥ್ಲೆಟಿಕ್ಸ್‌ ಮಹಿಳೆಯರು: 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್‌, ಗುಂಡು ಎಸೆತ, ಜಾವೆಲಿನ್‌ ಥ್ರೋ, ಡಿಸ್ಕಸ್‌ ಎಸೆತ, 110 ಮೀ ಹರ್ಡಲ್ಸ್‌, 4x100 ಮೀಟರ್‌ ರಿಲೇ. 

ಈಜು (ಪುರುಷರು ಹಾಗೂ ಮಹಿಳೆಯರು): 100 ಮೀ, 200 ಮೀ, 400 ಮೀ, ಫ್ರೀಸ್ಟೈಲ್‌/100 ಮೀ, 200 ಮೀ ಬ್ಯಾಕ್‌ಸ್ಟ್ರೋಕ್‌/100 ಮೀ, 200 ಮೀ, ಬ್ರೆಸ್ಟ್‌ ಸ್ಟ್ರೋಕ್‌ 100 ಮೀ, ಬಟರ್‌ ಪ್ಲೈ, 200 ಮೀ ಇಂಡಿವಿಜುಯಲ್‌ ಮಿಡ್ಲೇ, 4x100 ಮೀಟರ್ ರಿಲೇ, ಫ್ರೀಸ್ಟೈಲ್‌ ರಿಲೇ.

ಗುಂಪು ಆಟಗಳು: ಫುಟ್ಬಾಲ್‌ (ಪುರುಷರಿಗೆ ಮಾತ್ರ), ವಾಲಿಬಾಲ್‌, ಜಿಮ್ನಾಸ್ಟಿಕ್‌, ಕಬಡ್ಡಿ, ಕೊಕ್ಕೊ, ಹಾಕಿ, ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌, ಹ್ಯಾಂಡ್‌ಬಾಲ್‌, ಟೇಬಲ್‌ ಟೆನ್ನಿಸ್, ಟೆನ್ನಿಸ್‌, ಬಾಲ್‌ ಬ್ಯಾಡ್ಮಿಂಟನ್‌, ಥ್ರೋಬಾಲ್‌, ನೆಟ್‌ಬಾಲ್‌.
ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಹಾಗೂ ತಂಡಗಳು ಪ್ರವೇಶಪತ್ರಗಳನ್ನು ಇದೇ 23ರ ಸಂಜೆಯೊಳಗೆ ಖುದ್ದಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ: 080–22239771.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.