ADVERTISEMENT

ಹಾಕಿ: ಮೂರನೇ ಸುತ್ತಿಗೆ ಪಿಸಿಟಿಸಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 16:20 IST
Last Updated 4 ಫೆಬ್ರುವರಿ 2011, 16:20 IST

ಬೆಂಗಳೂರು: ಪಿ.ಸಿ.ಟಿ.ಸಿ. ತಂಡದ ವರು ಇಲ್ಲಿ ನಡೆಯುತ್ತಿರುವ ಬೆಂಗ ಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಮೂರನೇ ಸುತ್ತು ಪ್ರವೇಶಿಸಿದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪಿ.ಸಿ.ಟಿ.ಸಿ. ತಂಡ ಟೈಬ್ರೇಕರ್‌ನಂತರ ಒಟ್ಟು 7-6 ಗೋಲುಗಳಿಂದ ಆತಿಥೇಯ ಬೆಂಗ ಳೂರು ಕೊಡವ ಸಮಾಜ ತಂಡವನ್ನು ಮಣಿಸಿತು. ಆಟ ನಿಗದಿಯ ವೇಳೆಗೆ ಉಭಯ ತಂಡದವರು ತಲಾ ಎರಡು ಗೋಲುಗಳಿಸಿದ್ದರು. ಪಿಸಿಟಿಸಿ ತಂಡದ ಕಲ್ಯಾಣ್ ಕುಮಾರ್, ಎ.ಕೆ. ಬಾರ್ಲಾ ಹಾಗೂ ಕೊಡವ ಸಮಾಜ ತಂಡದ ಅವಿನಾಶ್ (2) ಗೋಲುಗಳಿಸಿದರು. ಹೆಚ್ಚಿನ ಅವಧಿಯ ಆಟದಲ್ಲಿ ನಿರ್ಧಿಷ್ಟ ಫಲಿತಾಂಶ ಬಾರದ ಕಾರಣ ವಿಜಯಿಗಳನ್ನು ನಿರ್ಧರಿಸಲು ಟೈಬ್ರೇಕರ್ ನಿಯಮ ಜಾರಿ ಮಾಡಲಾಯಿತು. ಟೈಬ್ರೇಕರ್‌ನಲ್ಲಿ ವಿಜಯಿ ತಂಡದ ಎ.ಕೆ. ಬಾರ್ಲಾ, ಎಕ್ಕಮ್, ಅಂಥೋಣಿ, ಭೀಮಯ್ಯ, ಎಸ್. ಕಜೂರ್ ಹಾಗೂ ಎದುರಾಳಿ ತಂಡದ ರಿಗಿನ್, ಸೋಮಣ್ಣ, ಬಾಬು, ಅನಿಲ್ ಚೆಂಡನ್ನು ಯಶಪಡಿಸಿಕೊಂಡರು.

ಇದೇ ಟೂರ್ನಿ ಇನ್ನೊಂದು ಪಂದ್ಯದಲ್ಲಿ ರೈಲ್ವೆ ಗಾಲಿ ಕಾರ್ಖಾನೆ (ಆರ್.ಡಬ್ಲ್ಯು.ಎಫ್.) ತಂಡದವರು 4-0 ಗೋಲುಗಳಿಂದ ಪೋಸ್ಟಲ್ ತಂಡವನ್ನು ಸೋಲಿಸಿದರು. ಏಕಪಕ್ಷೀ ಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಸಂಪತ್, ರವಿಕುಮಾರ್ (2), ಇಮ್ರಾನ್ ಚೆಂಡನ್ನು ಗುರಿ ಮುಟ್ಟಿಸಿದರು.

ನಾಳೆ (ಶನಿವಾರ) ಮಧ್ಯಾಹ್ನ 2-45ಕ್ಕೆ ಸಿ.ಒ.ಇ.-ಎಸ್.ಎ.ಐ. ‘ಬಿ’ ಹಾಗೂ ಮಧ್ಯಾಹ್ನ 4-00ಕ್ಕೆ ಎಚ್.ಎ.ಎಲ್.-ಸೆಂಟ್ರಲ್ ಎಕ್ಸೈಸ್ ನಡುವೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.