ADVERTISEMENT

IND vs SL 3ನೇ ಟಿ20 ಪಂದ್ಯ: ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾಗೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 13:52 IST
Last Updated 27 ಫೆಬ್ರುವರಿ 2022, 13:52 IST
 ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ
ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ   

ಧರ್ಮಶಾಲ: ಭಾರತ ತಂಡದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕದಾಸುನ್ ಶನಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆದರೆ, ವೇಗಿಗಳಾದಮೊಹಮ್ಮದ್ ಸಿರಾಜ್ ಮತ್ತು ಆವೇಶ್‌ ಖಾನ್ಲಂಕಾ ಪಡೆಗೆ ಆರಂಭಿಕ ಆಘಾತ ನೀಡಿದ್ದಾರೆ.

ಇಲ್ಲಿನ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಯುತ್ತಿದೆ.

ರೋಹಿತ್ ಪಡೆ ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಗಾಯಾಳು ಇಶಾನ್ ಕಿಶನ್ ಜೊತೆಗೆ,ಪ್ರಮುಖ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಾಹಲ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಯುವ ಸ್ಪಿನ್ನರ್ ರವಿ ಬಿಷ್ಣೋಯಿ, ಚೈನಾಮನ್ ಕುಲದೀಪ್ ಯಾದವ್, ವೇಗಿಗಳಾದ ಮೊಹಮ್ಮದ್ ಸಿರಾಜ್ಮತ್ತು ಆವೇಶ್ ಖಾನ್ ಸ್ಥಾನ ಪಡೆದಿದ್ದಾರೆ.

ADVERTISEMENT

ಶನಕ ಬಳಗವೂ ಎರಡು ಬದಲಾವಣೆಗಳನ್ನು ಮಾಡಿದೆ. ಪ್ರವೀಣ್ ಜಯವಿಕ್ರಮ ಮತ್ತು ಕಮೀಲ್ ಮಿಶ್ರಾ ಬದಲು ಜನಿತ್ ಲಿಯನಗೆ ಹಾಗೂ ಜೆಫ್ರಿ ವಂಡೆರ್ಸೆ ಆಡಲಿದ್ದಾರೆ.‌

ಲಂಕಾಗೆ ಆರಂಭಿಕ ಆಘಾತ
ಪಾಥುಮ್ ನಿಶಾಂಕ ಜೊತೆ ಇನಿಂಗ್ಸ್ ಆರಂಭಿಸಿದ ಅನುಭವಿ ದನುಷ್ಕ ಗುಣತಿಲಕ (0) ಅವರನ್ನು ಮೊಹಮ್ಮದ್ ಸಿರಾಜ್ ಮೊದಲ ಓವರ್‌ನಲ್ಲಿಯೇ ಪೆವಿಲಿಯನ್‌ಗೆ ಅಟ್ಟಿದರು. ಎರಡನೇ ಓವರ್‌ ಬೌಲಿಂಗ್ ಮಾಡಿದ ಆವೇಶ್‌ ಖಾನ್, 1 ರನ್ ಗಳಿಸಿದ್ದನಿಶಾಂಕ ಅವರನ್ನೂ ಔಟ್ ಮಾಡಿದರು.

ಹೀಗಾಗಿ ಪ್ರವಾಸಿ ತಂಡ ಎರಡು ಓವರ್‌ ಆಗುವಷ್ಟರಲ್ಲೇಆರಂಭಿಕ ಬ್ಯಾಟರ್‌ಗಳನ್ನು ಕಳೆದುಕೊಂಡಿದೆ. ತಂಡದ ಮೊತ್ತ5 ರನ್ ಆಗಿದ್ದು, ಇನ್ನೂ ಖಾತೆ ತೆರೆಯದ ಚರಿತ್ ಅಸಲಂಕ ಮತ್ತು ಜನಿತ್ ಲಿಯನಗೆಕ್ರೀಸ್‌ನಲ್ಲಿದ್ದಾರೆ.

ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ರೋಹಿತ್ ಶರ್ಮಾ ಪಡೆ, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಸಾಧಿಸುವ ಲೆಕ್ಕಾಚಾರದಲ್ಲಿದೆ. ಆದರೆ, ಈ ಪಂದ್ಯವನ್ನಾದರೂ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಳ್ಳುವ ಉದ್ದೇಶ ಲಂಕಾ ತಂಡದ್ದು.

ಮೊದಲ ಪಂದ್ಯದಲ್ಲಿ ಭಾರತ ನೀಡಿದ್ದ 200 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಲಂಕಾ, ನಿಗದಿತ 20 ಓವರ್‌ಗಳಲ್ಲಿ 137 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಎರಡನೇ ಪಂದ್ಯದಲ್ಲಿ ಶನಕ ಬಳಗ ನೀಡಿದ್ದ 184 ರನ್‌ಗಳ ಸವಾಲಿನ ಗುರಿಯನ್ನು, ರೋಹಿತ್ ಪಡೆ ಕೇವಲ 3 ವಿಕೆಟ್‌ ಕಳೆದುಕೊಂಡು ಇನ್ನೂ 17 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.