ADVERTISEMENT

ಲೆಗ್‌ಸ್ಪಿನ್ ದಿಗ್ಗಜ ಖಾದಿರ್‌ ಇನ್ನಿಲ್ಲ

ಪಿಟಿಐ
Published 7 ಸೆಪ್ಟೆಂಬರ್ 2019, 20:16 IST
Last Updated 7 ಸೆಪ್ಟೆಂಬರ್ 2019, 20:16 IST
ಅಬ್ದುಲ್ ಖಾದೀರ್
ಅಬ್ದುಲ್ ಖಾದೀರ್   

ಕರಾಚಿ/ನವದೆಹಲಿ (ಪಿಟಿಐ): ಲೆಗ್‌ಸ್ಪಿನ್‌ ಬೌಲಿಂಗ್‌ಗೆ ಕಲಾತ್ಮಕ ಸ್ಪರ್ಶ ನೀಡಿದ್ದಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಅಬ್ದುಲ್ ಖಾದಿರ್‌ (63) ಶುಕ್ರವಾರ ರಾತ್ರಿ ತೀವ್ರ ಹೃದಯಸ್ತಂಭನದಿಂದ ಲಾಹೋರ್‌ನಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರಿ, ನಾಲ್ವರು ಪುತ್ರರು ಇದ್ದಾರೆ. ಅವರ ಏಕೈಕ ಪುತ್ರಿಯನ್ನು ಪಾಕ್ ತಂಡದ ಆಟಗಾರ ಉಮರ್ ಅಕ್ಮಲ್ ಮದುವೆಯಾಗಿದ್ದಾರೆ.

ಖಾದಿರ್‌ 67 ಟೆಸ್ಟ್‌ಗಳನ್ನು ಆಡಿ 236 ವಿಕೆಟ್‌ ಗಳಿಸಿದ್ದರು. 104 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿ 132 ವಿಕೆಟ್ ಪಡೆದಿದ್ದರು. 1979ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಭಾರತ ಮತ್ತು ಪಾಕ್ ನಡುವಣ ಟೆಸ್ಟ್‌ನಲ್ಲಿ ಅವರು ಆಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅರ್ಧಶತಕ ಗಳಿಸಿದ್ದ ಸುನಿಲ್ ಗಾವಸ್ಕರ್ ವಿಕೆಟ್‌ ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.