ADVERTISEMENT

T20 World Cup: ಅಭ್ಯಾಸಕ್ಕೆ ಬಾರದ ಅಭಿಷೇಕ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 23:36 IST
Last Updated 10 ಫೆಬ್ರುವರಿ 2026, 23:36 IST
ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ   

ನವದೆಹಲಿ: ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಅದರಿಂದಾಗಿ ಮಂಗಳವಾರವೂ ಅವರು ನೆಟ್ಸ್ ಅಭ್ಯಾಸದಲ್ಲಿ ಪಾಲ್ಗೊಳ್ಳಲಿಲ್ಲ. ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಪೂರ್ಣ ಫಿಟ್ ಆಗಿದ್ದು ಬಹಳ ಹೊತ್ತು ಬೌಲಿಂಗ್ ಮಾಡಿದರು. 

ಗುರುವಾರ ನಡೆಯಲಿರುವ ನಮಿಬಿಯಾ ಎದುರಿನ ಪಂದ್ಯದಲ್ಲಿ ಶರ್ಮಾ ಆಡುವುದರ ಕುರಿತು ಸ್ಪಷ್ಟವಾಗಿಲ್ಲ. 

‘ವಾಷಿಂಗ್ಟನ್ ಅವರು ನಿನ್ನೆ (ಸೋಮವಾರ) ತಂಡಕ್ಕೆ ಸೇರಿಕೊಂಡಿದ್ದಾರೆ. ಅವರು ಅಭ್ಯಾಸದಲ್ಲಿದ್ದಾರೆ. ಆದರೆ ಅಭಿ ಅವರ ಹೊಟ್ಟೆನೋವು ಪೂರ್ಣ ಶಮನವಾಗಿಲ್ಲ. ಅವರಿಗೆ ಚೇತರಿಸಿಕೊಳ್ಳಲು ಇನ್ನಷ್ಟು ಸಮಯ ಬೇಕಿದೆ’ ಎಂದು ಭಾರತ ತಂಡದ ಸಹಾಯಕ ಕೋಚ್ ರಯನ್ ಟೆನ್ ಡಾಷೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.