ADVERTISEMENT

ಅಭಿಷೇಕ್‌ ಶರ್ಮಾ ಅತ್ಯುತ್ತಮ ಪ್ರತಿಭೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್‌

ಪಿಟಿಐ
Published 28 ಅಕ್ಟೋಬರ್ 2025, 8:22 IST
Last Updated 28 ಅಕ್ಟೋಬರ್ 2025, 8:22 IST
   

ಕ್ಯಾನ್‌ಬೆರಾ: ಭಾರತದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಅವರು ಅತ್ಯುತ್ತಮ ಪ್ರತಿಭೆಯಾಗಿದ್ದು, ಅದ್ಭುತ ಆಟಗಾರರಾಗಿದ್ದಾರೆ ಎಂದು ಆಸ್ಟ್ರೇಲಿಯಾ ಟಿ–20 ತಂಡದ ನಾಯಕ ಮಿಚೆಲ್ ಮಾರ್ಷ್‌ ಅಭಿಪ್ರಾಯಪಟ್ಟಿದ್ದಾರೆ.

‘ಭಾರತ ಪರ ಅವರು ಒಳ್ಳೆಯ ಆರಂಭ ಒದಗಿಸಿಕೊಡುತ್ತಿದ್ದಾರೆ. ಕೆಲವು ವರ್ಷಗಳಿಂದ ಐಪಿಎಲ್‌ನಲ್ಲೂ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅತ್ಯುತ್ತಮ ಆಟವಾಡುತ್ತಿದ್ದಾರೆ. ಅವರನ್ನು ಆದಷ್ಟು ಬೇಗ ಔಟ್‌ ಮಾಡುವುದು ನಮ್ಮ ಗುರಿಯಾಗಿದೆ’ ಎಂದು ಮಿಚೆಲ್ ಮಾರ್ಷ್‌ ಹೇಳಿದ್ದಾರೆ.

ಅಭಿಷೇಕ್‌ ಶರ್ಮಾ ಅವರು ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತದ ಪರ 44.85ರ ಸರಾಸರಿಯಲ್ಲಿ 314 ರನ್‌ ಗಳಿಸಿದ್ದರು.

ADVERTISEMENT

ಕಳೆದ 10 ಇನಿಂಗ್ಸ್‌ನಲ್ಲಿ 2 ಶತಕ ಹಾಗೂ 2 ಅರ್ಧಶತಕ ಗಳಿಸಿರುವ ಮಿಚೆಲ್ ಮಾರ್ಷ್‌ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಭಾರತದ ವಿರುದ್ಧವೂ ಇದನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.