ಮೆಲ್ಬರ್ನ್: ಕೋವಿಡ್ ಕಾಲದಲ್ಲಿ ವಿದೇಶಗಳಲ್ಲಿ ನಡೆಯುವ ಟಿ20 ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸುವ ಮುನ್ನ ಸಾಕಷ್ಟು ಯೋಚಿಸಬೇಕು ಎಂದು ಆಸ್ಟ್ರೇಲಿಯಾ ಕ್ರಿಕೆಟರ್‌ಗಳ ಸಂಸ್ಥೆ (ಎಸಿಎ) ದೇಶದ ಆಟಗಾರರಿಗೆ ಸೂಚಿಸಿದೆ.
‘ಜಗತ್ತಿನಾದ್ಯಂತ ಕೋವಿಡ್ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಹೋಮ್‌ವರ್ಕ್ ಮಾಡಿಯೇ ಯಾವುದೇ ಕೆಲಸಕ್ಕೆ ಕೈಹಾಕಬೇಕು’ ಎಂದು ಎಸಿಎ ಮುಖ್ಯ ಕಾರ್ಯನಿರ್ವಾಹಕ ಟೊಡ್ ಗ್ರೀನ್‌ಬರ್ಗ್ ಹೇಳಿದ್ದಾರೆ.
ಕೋವಿಡ್ ಹೆಚ್ಚುತ್ತಿರುವುದರಿಂದ ಆಸ್ಟ್ರೇಲಿಯಾವು ತನ್ನ ಗಡಿ ಪ್ರದೇಶಗಳನ್ನು ಮೇ 15ರ ವರೆಗೆ ಮುಚ್ಚಿದೆ. ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೂ ಮೊದಲು ಬಯೊಬಬಲ್ ಸಂಕಟವನ್ನು ಮನಗಂಡು ಜೋಶ್ ಹ್ಯಾಜಲ್‌ವುಡ್, ಮಿಷೆಲ್ ಮಾರ್ಶ್ ಮತ್ತು ಜೋಶ್ ಫಿಲಿಪ್ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದರು. ಭಾರತದಲ್ಲಿ ಕೋವಿಡ್ ಏರುಗತಿಯಲ್ಲಿ ಸಾಗುತ್ತಿದ್ದಂತೆ ಆ್ಯಡಂ ಜಂಪಾ, ಕೇನ್ ರಿಚರ್ಡ್ಸನ್ ಮತ್ತು ಆ್ಯಂಡ್ರ್ಯೂ ಟೈ ಅವರು ಬಯೊಬಬಲ್‌ನಿಂದ ಹೊರಬಂದು ತವರಿಗೆ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.