ಏಡನ್ ಮರ್ಕರಂ
ರಾಯಿಟರ್ಸ್ ಚಿತ್ರಗಳು
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್–2025ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಶತಕ ಸಿಡಿಸಿದ ಏಡನ್ ಮರ್ಕರಂ, ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್ ಪಟ್ಟಕ್ಕೇರಲು ನೆರವಾದರು.
ಐಸಿಸಿ ಟೂರ್ನಿಗಳ ನಿರ್ಣಾಯಕ ಪಂದ್ಯಗಳಲ್ಲಿ ಮುಗ್ಗರಿಸುತ್ತಿದ್ದ ಆಪ್ರಿಕಾ ತಂಡ, ಮರ್ಕರಂ ಆಟದ ಬಲದಿಂದ ಈ ಬಾರಿ 'ಚೋಕರ್ಸ್' ಎನಿಸಿಕೊಳ್ಳುವುದು ತಪ್ಪಿತು.
'ಕ್ರಿಕೆಟ್ ಕಾಶಿ' ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಆಸಿಸ್ ನೀಡಿದ 282ರನ್ ಗುರಿ ಎದುರು 136 ರನ್ ಗಳಿಸಿದ ಅವರು, ತಮ್ಮ ತಂಡ ಮೊದಲ ಬಾರಿಗೆ ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲಲು ಕಾರಣರಾದರು.
ಮರ್ಕರಂ ಈ ಬಾರಿಯಷ್ಟೇ ಅಲ್ಲ. ಹರಿಣಗಳ ತಂಡ 2014ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಸಮಿ ಅಸ್ಲಾಮ್ ಪಾಕ್ ಪಡೆಯನ್ನು ಮುನ್ನಡೆಸಿದ್ದರು. ಮರ್ಕರಂ ದಕ್ಷಿಣ ಆಫ್ರಿಕಾ ನಾಯಕರಾಗಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಅಸ್ಲಾಮ್ ಬಳಗ ಕೇವಲ 131 ರನ್ ಗಳಿಸಿ ಆಲೌಟ್ ಆಗಿತ್ತು. ಅಲ್ಪ ಗುರಿ ಬೆನ್ನತ್ತಿದ ಆಫ್ರಿಕಾ ಜೇವಕ 28 ರನ್‌ಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ರಕ್ಷಣಾತ್ಮಕ ಆಟವಾಡಿದ್ದ ಮರ್ಕರಂ, 3ನೇ ವಿಕೆಟ್‌ಗೆ ಗ್ರೇಗ್ ಓಲ್ಡ್‌ಫೀಲ್ಡ್ (40 ರನ್) ಜೊತೆ ಸೇರಿ 71 ರನ್ ಸೇರಿಸಿದ್ದರು.
ಕೊನೆವರೆಗೂ ಆಡಿ 125 ಎಸೆತಗಳಲ್ಲಿ 66 ರನ್ ಗಳಿಸಿದ್ದ ಅವರು 42.1 ಓವರ್‌ಗಳಲ್ಲಿ ತಮ್ಮ ತಂಡಕ್ಕೆ ಗೆಲುವಿನ ರನ್ ಗಳಿಸಿಕೊಟ್ಟಿದ್ದರು. ಆ ಮೂಲಕ ತಮ್ಮ ತಂಡವನ್ನು ಮೊದಲ ಬಾರಿಗೆ U19 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.