ADVERTISEMENT

ಭಾರತಕ್ಕೆ ಜಯ ತಂದಿತ್ತ ಹರ್ಷಲ್ ಪಟೇಲ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 3:52 IST
Last Updated 4 ಜುಲೈ 2022, 3:52 IST
ಹರ್ಷಲ್‌ ಪಟೇಲ್
ಹರ್ಷಲ್‌ ಪಟೇಲ್   

ನಾರ್ಥಾಂಪ್ಟನ್: ಹರ್ಷಲ್‌ ಪಟೇಲ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ ತಂಡ ನಾರ್ಥಾಂಪ್ಟನ್‌ಷೈರ್‌ ವಿರುದ್ಧದ ಟಿ20 ಅಭ್ಯಾಸ ಪಂದ್ಯದಲ್ಲಿ 10 ರನ್‌ಗಳ ಜಯ ಸಾಧಿಸಿತು.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಿನೇಶ್‌ ಕಾರ್ತಿಕ್‌ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 ರನ್ ಗಳಿಸಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರೂ ಹರ್ಷಲ್ (54 ರನ್‌, 36 ಎ, 4X5, 6X3) ತಂಡದ ಗೌರವಾರ್ಹ ಮೊತ್ತಕ್ಕೆ ಕಾರಣರಾದರು.

ಭಾರತದ ಶಿಸ್ತಿನ ಬೌಲಿಂಗ್‌ ದಾಳಿಗೆ ಪರದಾಟ ನಡೆಸಿದ ನಾರ್ಥಾಂಪ್ಟನ್‌ಷೈರ್, 139 ರನ್‌ಗಳಿಗೆ ಆಲೌಟಾಯಿತು. ಅರ್ಷ್‌ದೀಪ್‌ ಸಿಂಗ್, ಹರ್ಷಲ್‌ ಮತ್ತು ಯಜುವೇಂದ್ರ ಚಾಹಲ್‌ ತಲಾ ಎರಡು ವಿಕೆಟ್ ಪಡೆದರು.

ADVERTISEMENT

ಡರ್ಬಿಷೈರ್‌ ಎದುರಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಪಡೆದಿದ್ದ ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಸಂಕ್ಷಿಪ್ತ ಸ್ಕೋರ್: ಭಾರತ 8ಕ್ಕೆ 149 (20 ಓವರ್) ಇಶಾನ್‌ ಕಿಶನ್ 16, ದಿನೇಶ್‌ ಕಾರ್ತಿಕ್ 34, ವೆಂಕಟೇಶ್‌ ಅ‌ಯ್ಯರ್‌ 20, ಹರ್ಷಲ್‌ ಪಟೇಲ್‌ 54, ಬ್ರೆಂಡನ್‌ ಗ್ಲೋವರ್‌ 33ಕ್ಕೆ 3, ನೇಥನ್‌ ಬಕ್ 17ಕ್ಕೆ 2

ನಾರ್ಥಾಂಪ್ಟನ್‌ಷೈರ್ 139 (19.3 ಓವರ್) ಎಮಿಲಿಯೊ ಗೇ 22, ಸೈಫ್‌ ಝೈಬ್ 33, ನೇಥನ್‌ ಬಕ್ 18, ಅರ್ಷ್‌ದೀಪ್‌ ಸಿಂಗ್ 29ಕ್ಕೆ 2, ಪ್ರಸಿದ್ಧ ಕೃಷ್ಣ 27ಕ್ಕೆ 1, ಆವೇಶ್‌ ಖಾನ್ 16ಕ್ಕೆ 2, ಹರ್ಷಲ್ ಪಟೇಲ್‌ 23ಕ್ಕೆ 2, ಯುಜುವೇಂದ್ರ ಚಾಹಲ್ 25ಕ್ಕೆ 2)

ಫಲಿತಾಂಶ: ಭಾರತಕ್ಕೆ 10 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.