ADVERTISEMENT

ಅಂಧರ ಟಿ20 ವಿಶ್ವಕಪ್‌: ಪ್ರಶಸ್ತಿಗೆ ಭಾರತ– ಬಾಂಗ್ಲಾ ಸೆಣಸು

ಸೆಮಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಜಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 4:49 IST
Last Updated 16 ಡಿಸೆಂಬರ್ 2022, 4:49 IST
ಶತಕ ಗಳಿಸಿದ ಸುನಿಲ್‌ ರಮೇಶ್‌
ಶತಕ ಗಳಿಸಿದ ಸುನಿಲ್‌ ರಮೇಶ್‌   

ಬೆಂಗಳೂರು: ಸುನಿಲ್‌ ರಮೇಶ್‌ ಗಳಿಸಿದ ಶತಕ ಹಾಗೂ ಅಜಯ್‌ಕುಮಾರ್‌ ರೆಡ್ಡಿ ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ ತಂಡದವರು ಅಂಧರ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಥಣಿಸಂದ್ರದ ಸಂಪ್ರಸಿದ್ಧ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿ ಫೈನಲ್‌ನಲ್ಲಿ ಭಾರತ 207 ರನ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 337 ರನ್‌ ಪೇರಿಸಿತು. ಸುನಿಲ್‌ 110 ಹಾಗೂ ಅಜಯ್‌ 81 ರನ್‌ ಗಳಿಸಿದರು.

ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.5 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟಾಯಿತು. ಅಜಯ್‌ ಕುಮಾರ್‌ ಮೂರು ವಿಕೆಟ್‌ ಪಡೆದರು.

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶದ ಸವಾಲು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಬಾಂಗ್ಲಾ ತಂಡ 64 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 337 (ಸುನಿಲ್‌ ರಮೇಶ್‌ 110, ಅಜಯ್‌ ಕುಮಾರ್‌ ರೆಡ್ಡಿ 81. ಪ್ರಕಾಶ್‌ ಜಯರಾಮಯ್ಯ ಔಟಾಗದೆ 22, ಐಸಾಕ್‌ ಅಸಂದಾ 53ಕ್ಕೆ 1) ದಕ್ಷಿಣ ಆಫ್ರಿಕಾ 19.5 ಓವರ್‌ಗಳಲ್ಲಿ 130 (ಭುಲ್‌ ಬಿಂಡ್ಲಾ 33, ಅಜಯ್‌ ಕುಮಾರ್‌ ರೆಡ್ಡಿ 13ಕ್ಕೆ 3, ಪ್ರವೀಣ್‌ ಕುಮಾರ್‌ 10ಕ್ಕೆ 1, ಸುನಿಲ್‌ ರಮೇಶ್‌ 15ಕ್ಕೆ 1) ಫಲಿತಾಂಶ: ಭಾರತಕ್ಕೆ 207 ರನ್‌ ಗೆಲುವು

ಬಾಂಗ್ಲಾದೇಶ: 17 ಓವರ್‌ಗಳಲ್ಲಿ 3 ವಿಕೆಟ್‌ಗೆ 188 (ಆಶಿಕುರ್‌ ರೆಹಮಾನ್‌ 70, ಸಲ್ಮಾನ್‌ 61, ಸಹನ್‌ ಕುಮಾರ 47ಕ್ಕೆ 1) ಶ್ರೀಲಂಕಾ 14.3 ಓವರ್‌ಗಳಲ್ಲಿ 124 (ರುವಾನ್‌ ವಸಂತ 24, ಸುರಂಗ ಸಂಪತ್‌ 20, ಆಶಿಕುರ್‌ ರೆಹಮಾನ್‌ 20ಕ್ಕೆ 2) ಫಲಿತಾಂಶ: ಬಾಂಗ್ಲಾಕ್ಕೆ 64 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.