ವಿಶಾಖಪಟ್ಟಣ: ಐಸಿಸಿ ಮಹಿಳಾ ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾನುವಾರದಂದು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿವೆ. ‘ಭಾರತ ನಮ್ಮ ತಂಡವನ್ನು ಸೋಲಿಸಲು ಎಷ್ಟು ಹವಣಿಸುತ್ತಿದೆ ಎಂಬುದು ನಮಗೆ ತಿಳಿದಿದೆ. ಆದರೆ ನಾವು ಅವರ ವಿರುದ್ಧ ಪ್ರಾಬಲ್ಯ ಸಾಧಿಸಲು ಸಿದ್ಧರಿದ್ದೇವೆ‘ ಎಂದು ಆಸಿಸ್ ನಾಯಕಿ ಅಲಿಸಾ ಹೀಲಿ ಹೇಳಿದರು.
ಪ್ರತಿಷ್ಠಿತ ಪಂದ್ಯದ ಕುರಿತು ಮಾತನಾಡಿದ ಆಸಿಸ್ ನಾಯಕಿ ಅಲಿಸಾ ಹೀಲಿ, ‘ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಹೆಚ್ಚು ಪಂದ್ಯಗಳನ್ನು ಆಡುತ್ತಿವೆ. ಹಾಗಾಗಿ ಉಭಯ ತಂಡಗಳ ನಡುವಿನ ಪೈಪೋಟಿ ಹೆಚ್ಚಾಗಿದೆ. ಭಾರತ ನಮ್ಮನ್ನು ಸೋಲಿಸಲು ಎಷ್ಟು ಬಯಸುತ್ತದೆ ಎಂದು ನಮಗೆ ತಿಳಿದಿದೆ. ಆದರೆ, ನಾವು ಇಲ್ಲಿಯೂ ಪ್ರಾಬಲ್ಯ ಸಾಧಿಸಲು ಅಷ್ಟೇ ಉತ್ಸುಕರಾಗಿದ್ದೇವೆ‘ ಎಂದು ಹೇಳಿದರು.
‘ಈ ಟೂರ್ನಮೆಂಟ್‌ನಲ್ಲಿ ಜನರು ನಮ್ಮನ್ನು ನೆಚ್ಚಿನ ತಂಡವೆಂದು ಪರಿಗಣಿಸುತ್ತಿರುವುದು ಸಂತಸ ತಂದಿದೆ. ಟೀಂ ಇಂಡಿಯಾಗೆ ತವರಿನಲ್ಲಿ ಟ್ರೋಪಿ ಗೆಲ್ಲುವ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಅವರು ತವರಿನ ಪಿಚ್‌ನಲ್ಲಿ ನಿಜವಾಗಿಯೂ ಆರಾಮದಾಯಕವಾಗಿದ್ದಾರೆ. ಮಾತ್ರವಲ್ಲ, ನಮ್ಮ ಜೊತೆ ಪೈಪೋಟಿ ನಡೆಸಲು ಅವರಿಗೆ ಇದಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ‘ ಎಂದರು.