ADVERTISEMENT

ಅನಂತಾಚಾರ್ ಸ್ಮಾರಕ 12 ವರ್ಷದೊಳಗಿನವರ ಕ್ರಿಕೆಟ್: ಧನ್ವಂತ್ ಆಲ್‌ರೌಂಡ್ ಆಟ

​ಪ್ರಜಾವಾಣಿ ವಾರ್ತೆ
Published 2 ಮೇ 2025, 22:00 IST
Last Updated 2 ಮೇ 2025, 22:00 IST
<div class="paragraphs"><p>ಕ್ರಿಕೆಟ್</p></div>

ಕ್ರಿಕೆಟ್

   

ಬೆಂಗಳೂರು: ಆಲ್‌ರೌಂಡ್ ಆಟವಾಡಿದ ಧನ್ವಂತ್ (19ಕ್ಕೆ1,  ಔಟಾಗದೇ 40) ಅವರ ನೆರವಿನಿಂದ ಕೆಸಿಸಿ ಗುರುಕುಲ ತಂಡವು ಪ್ರೊ. ಅನಂತಾಚಾರ್ ಸ್ಮಾರಕ 12 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪ್ಯಾಂಥರ್ಸ್‌ ಕ್ರಿಕೆಟ್ ಅಕಾಡೆಮಿ ಎದುರು ಜಯಿಸಿತು

ಎಪಿಎಸ್ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿಯು 25 ಓವರ್‌ಗಳಲ್ಲಿ 8ಕ್ಕೆ 105 ರನ್ ಗಳಿಸಿತು. ಅದಕ್ಕುತ್ತರವಾಗಿ ಕೆಸಿಸಿ ತಂಡವು 14 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 198 ರನ್ ಗಳಿಸಿ ಜಯಿಸಿತು. 

ADVERTISEMENT

ಸಂಕ್ಷಿಪ್ತ ಸ್ಕೋರು: ಪ್ಯಾಂಥರ್ಸ್ ಸಿಎ: 25 ಓವರ್‌ಗಳಲ್ಲಿ 8ಕ್ಕೆ105 (ಕೃಷ್ಣನ್ ನವೀನ್  ಔಟಾಗದೇ 38, ಅರವ್ ರೆಡ್ಡಿ 8ಕ್ಕೆ2, ಧನ್ವಂತ್ 19ಕ್ಕೆ1) ಕೆಸಿಸಿ ಗುರುಕುಲ: 14 ಓವರ್‌ಗಳಲ್ಲಿ 3ಕ್ಕೆ108 (ಧನ್ವಂತ್ ಔಟಾಗದೇ 40) ಫಲಿತಾಂಶ: ಕೆಸಿಸಿ ಗುರುಕುಲ್ ತಂಡಕ್ಕೆ 7 ವಿಕೆಟ್‌ ಜಯ. ಕೆಸಿಸಿ ಗುರುಕುಲ: 25 ಓವರ್‌ಗಳಲ್ಲಿ 125 (ಬಿ ಅಭಿನವ್ 34, ಜೆ.ಪಿ. ಸ್ಕೂಲ್ ಆಫ್‌ ಕ್ರಿಕೆಟ್: 20 ಓವರ್‌ಗಳಲ್ಲಿ 72 (ಧನ್ವಂತ್ 14ಕ್ಕೆ2, ಆರವ್ ರೆಡ್ಡಿ 15ಕ್ಕೆ2) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.