ADVERTISEMENT

Ashes 1st Test| ಹೆಡ್ ಸ್ಫೋಟಕ ಶತಕ: ಇಂಗ್ಲೆಂಡ್ ವಿರುದ್ಧ ಸಲಭವಾಗಿ ಗೆದ್ದ ಆಸೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 10:24 IST
Last Updated 22 ನವೆಂಬರ್ 2025, 10:24 IST
<div class="paragraphs"><p>ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಟ್ರಾವಿಸ್ ಹೆಡ್</p></div>

ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ಟ್ರಾವಿಸ್ ಹೆಡ್

   

ಚಿತ್ರ ಕೃಪೆ: ಐಸಿಸಿ

ಪರ್ತ್: ಮಿಚೆಲ್ ಸ್ಟಾರ್ ಮಾರಕ ಬೌಲಿಂಗ್‌ ಹಾಗೂ ಟ್ರಾವಿಸ್ ಹೆಡ್ ಅವರ ಸ್ಫೋಟಕ ಶತಕದ ನೆರವಿನಿಂದ ಐದು ಪಂದ್ಯಗಳ ಆ್ಯಷಸ್ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸುಲಭ ಗೆಲುವು ದಾಖಲಿಸಿದೆ.

ADVERTISEMENT

205 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 29.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ (123: 83ಎ, 4X16, 6X4) ಸ್ಫೋಟಕ ಶತಕ ಹಾಗೂ ಮಾರ್ನಸ್ ಲಾಬುಷೇನ್ (51: 49ಎ, 4X6, 6X1) ಅರ್ಧಶತಕದ ನೆರವಿನಿಂದ ಎರಡನೇ ದಿನದಲ್ಲೇ ಗೆಲುವು ಸಾಧಿಸಿತು.

ಇದಕ್ಕೂ ಮೊದಲು 40 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವನ್ನು ಆಸೀಸ್ ವೇಗಿಗಳು ಕಾಡಿದರು. ಬೋಲಾಂಡ್ (11.4–2–33–4) ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಹಾಗೂ ಬ್ರೆಂಡನ್ ಡಗ್ಗೆಟ್ ತಲಾ 3 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಕೇವಲ 164 ರನ್‌ಗಳಿಗೆ ಆಲೌಟ್ ಆಗುವಂತೆ ನೋಡಿಕೊಂಡರು

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರಂತರವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೆಳ ಕ್ರಮಾಂಕದ ಬ್ಯಾಟ್ ಮಾಡಿದ ಗಟ್ ಆಟ್ಕಿನ್‌ಸನ್ (37) ಗರಿಷ್ಠ ರನ್ ಗಳಿಸಿದ ಆಟಗಾರರಾದರು. ಓಲಿ ಪೋಪ್ (33) ಹಾಗೂ ಬೆನ್ ಡಕೆಟ್ (28) ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಮೊತ್ತವನ್ನು 160ರ ಗಡಿ ದಾಟಿಸಿದರು.

ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನ 40 ರನ್‌ಗಳ ಮುನ್ನಡೆ ಹಾಗೂ ಎರಡನೇ ಇನಿಂಗ್ಸ್‌ 164 ರನ್ ಸೇರಿ ಆಸ್ಟ್ರೇಲಿಯಾ ಗೆಲುವಿಗೆ 205 ರನ್‌ಗಳ ಟಾರ್ಗೆಟ್ ನೀಡಿತ್ತು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ ಮೊದಲ ಇನಿಂಗ್ಸ್ -172/10 (ಓಲಿ ಪೋಪ್ 46, ಹ್ಯಾರಿ ಬ್ರೂಕ್ 52. ಮಿಚಲ್ ಸ್ಟಾರ್ಕ್ 58‌/7), ಆಸ್ಟ್ರೇಲಿಯಾ ಮೊದಲ ಇನಿಂಗ್ಸ್–132/10 (ಅಲೆಕ್ಸ್ ಕ್ಯಾರಿ 26, ಕ್ಯಾಮರೂನ್ ಗ್ರೀನ್ 24. ಬೆನ್ ಸ್ಟೋಕ್ಸ್ 23/5)

ಇಂಗ್ಲೆಂಡ್ ದ್ವೀತಿಯ ಇನಿಂಗ್ಸ್–164/10 (ಗಟ್ ಆಟ್ಕಿನ್‌ಸನ್ 37, ಓಲಿ ಪೋಪ್ 33. ಬೋಲಾಂಡ್ 33/4), ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 205‌/2 ಗೆಲುವು (ಟ್ರಾವಿಸ್ ಹೆಡ್ 123, ಲಾಬುಷೇನ್ 51 ಅಜೇಯ. ಬ್ರೈಡನ್ ಕಾರ್ಸೆ 44/2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.