ADVERTISEMENT

Ashes 1st Test: ಆಸ್ಟ್ರೇಲಿಯಾ ಗೆಲುವಿಗೆ 205 ರನ್ ಟಾರ್ಗೆಟ್ ನೀಡಿದ ಆಂಗ್ಲರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 7:55 IST
Last Updated 22 ನವೆಂಬರ್ 2025, 7:55 IST
<div class="paragraphs"><p>ವಿಕೆಟ್ ಪಡೆದ ಸಂಭ್ರಮದಲ್ಲಿ ಮಿಚೆಲ್ ಸ್ಟಾರ್ಕ್</p></div>

ವಿಕೆಟ್ ಪಡೆದ ಸಂಭ್ರಮದಲ್ಲಿ ಮಿಚೆಲ್ ಸ್ಟಾರ್ಕ್

   

ಚಿತ್ರ: @TheCineprism

ಪರ್ತ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಇಂಗ್ಲೆಂಡ್ ತಂಡ 205 ರನ್‌ಗಳ ಟಾರ್ಗೆಟ್ ನೀಡಿದೆ.

ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 123 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ತಂಡ ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲೇ 9 ರನ್‌ ಸೇರಿಸಿ 132 ರನ್‌ಗಳಿಗೆ ಆಲೌಟ್ ಆಯಿತು.

40 ರನ್‌ಗಳ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆಸೀಸ್ ವೇಗಿಗಳು ಕಾಡಿದರು. ಬೋಲಾಂಡ್ (11.4–2–33–4) ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಹಾಗೂ ಬ್ರೆಂಡನ್ ಡಗ್ಗೆಟ್ ತಲಾ 3 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಕೇವಲ 164 ರನ್‌ಗಳಿಗೆ ಆಲೌಟ್ ಆಗುವಂತೆ ನೋಡಿಕೊಂಡರು

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನಿರಂತರವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೆಳ ಕ್ರಮಾಂಕದ ಬ್ಯಾಟ್ ಮಾಡಿದ ಗಟ್ ಆಟ್ಕಿನ್‌ಸನ್ (37) ಗರಿಷ್ಠ ರನ್ ಗಳಿಸಿದ ಆಟಗಾರರಾದರು. ಓಲಿ ಪೋಪ್ (33) ಹಾಗೂ ಬೆನ್ ಡಕೆಟ್ (28) ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಮೊತ್ತವನ್ನು 160ರ ಗಡಿ ದಾಟಿಸಿದರು.

ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನ 40 ರನ್‌ಗಳ ಮುನ್ನಡೆ ಹಾಗೂ ಎರಡನೇ ಇನಿಂಗ್ಸ್‌ 164 ರನ್ ಸೇರಿ ಆಸ್ಟ್ರೇಲಿಯಾ ಗೆಲುವಿಗೆ 205 ರನ್‌ಗಳ ಟಾರ್ಗೆಟ್ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.