ADVERTISEMENT

Ashes Test | ಒಂದೇ ದಿನ 19 ವಿಕೆಟ್ಸ್: ಆ್ಯಷಸ್ ಟೆಸ್ಟ್‌ನಲ್ಲಿ ಹೊಸ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 5:30 IST
Last Updated 22 ನವೆಂಬರ್ 2025, 5:30 IST
<div class="paragraphs"><p>ಆಸ್ಟ್ರೇಲಿಯಾ ವಿಕೆಟ್ ತೆಗೆದು ಸಂಭ್ರಮಿಸಿದ ಸ್ಟೋಕ್ಸ್</p></div>

ಆಸ್ಟ್ರೇಲಿಯಾ ವಿಕೆಟ್ ತೆಗೆದು ಸಂಭ್ರಮಿಸಿದ ಸ್ಟೋಕ್ಸ್

   

ಚಿತ್ರ: @ESPNcricinfo

ಪರ್ತ್: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ನಿನ್ನೆ (ನವೆಂಬರ್ 21) ಯಿಂದ ಆರಂಭಗೊಂಡಿದೆ. ಮೊದಲ ದಿನ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡೂ ದೇಶಗಳ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪರಿಣಾಮ ಒಂದೇ ದಿನ ಉಭಯ ದೇಶಗಳ 19 ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು.

ADVERTISEMENT

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ 132 ರನ್‌ಗಳಿಗೆ ಆಲೌಟ್ ಆಯಿತು. ಇದರಲ್ಲಿ ಆಸೀಸ್‌ನ 9 ವಿಕೆಟ್‌ಗಳು ಮೊದಲ ದಿನವೇ ಪತನವಾಗಿದ್ದು ವಿಶೇಷ.

ಆ್ಯಷಸ್ ಟೆಸ್ಟ್‌ನಲ್ಲಿ ಹೊಸ ದಾಖಲೆ

ಪರ್ತ್‌ನಲ್ಲಿ ಆರಂಭವಾಗಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನ ಒಟ್ಟು 19 ವಿಕೆಟ್‌ಗಳು ಪತನಗೊಂಡಿವೆ. ಇದು ಆ್ಯಷಸ್ ಟೆಸ್ಟ್ ಇತಿಹಾಸದಲ್ಲಿ ಮೊದಲ ದಿನ ಪತನವಾದ ಅತೀ ಹೆಚ್ಚು ವಿಕೆಟ್‌ಗಳಾಗಿವೆ. ಇದಕ್ಕೂ ಮೊದಲು ಮೊದಲು 1909 ರಲ್ಲಿ ಓಲ್ಡ್ ಟ್ರಾಫರ್ಡ್‌ ಮೈದಾನದಲ್ಲಿ ನಡೆದ ಆ್ಯಷಸ್ ಸರಣಿಯಲ್ಲಿ ಮೊದಲ ದಿನ 18 ವಿಕೆಟ್‌ಗಳು ಪತನಗೊಂಡಿದ್ದವು. ಇದು ಈ ಹಿಂದಿನ ದಾಖಲೆಯಾಗಿತ್ತು.

ಪರ್ತ್‌ನಲ್ಲಿ ಒಂದೇ ದಿನ ಅತೀ ಹೆಚ್ಚು ವಿಕೆಟ್

ಪರ್ತ್ ಮೈದಾನದಲ್ಲಿ ಕೂಡ ಒಂದೇ ದಿನ ಅತೀ ಹೆಚ್ಚು ಬ್ಯಾಟರ್‌ಗಳು ಔಟ್ ಆಗಿರುವುದು ಇದೇ ಮೊದಲು. ಇದಕ್ಕೂ ಮೊದಲು 2024ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 17 ವಿಕೆಟ್‌ಗಳು ಪತನಗೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.