ಮುಂಬೈ: ವೇಗದ ಬೌಲರ್ ಅಶೋಕ್ ದಿಂಡಾ ಅವರು ಈ ಬಾರಿಯ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ತಂಡದ ಪರ ಆಡಲಿದ್ದಾರೆ. ಬಂಗಾಳ ತಂಡದಲ್ಲಿ ಕಳೆದ ವರ್ಷ ಅವರನ್ನು ಕಡೆಗಣಿಸಲಾಗಿತ್ತು.ಇದರಿಂದ ಬೇಸರಗೊಂಡ ಅವರು ತಾನು ರಾಜಕೀಯದ ಬಲಿಪಶು ಎಂದು ಹೇಳಿಕೊಂಡಿದ್ದರು. ಬಂಗಾಳ ತಂಡದ ಪರವಾಗಿ ಇನ್ನು ಆಡುವುದಿಲ್ಲ ಎಂದೂ ತಿಳಿಸಿದ್ದರು.
36 ವರ್ಷದ ಅಶೋಕ್ ದಿಂಡಾ ಮತ್ತು ಬೌಲಿಂಗ್ ಕೋಚ್ ರಣದೇವ ಬೋಸ್ ನಡುವೆ ಕಲಹ ಉಂಟಾಗಿತ್ತು. ನಂತರ ದಿಂಡಾ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.
‘ದಿಂಡಾ ಅವರೊಂದಿಗೆ ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಈ ಬಾರಿಯ ರಣಜಿ ಟೂರ್ನಿಯಲ್ಲಿ ಅವರು ನಮ್ಮ ತಂಡದಲ್ಲಿ ಆಡಲಿದ್ದಾರೆ’ ಎಂದು ಗೋವಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ವಿಪುಲ್ ಫಡ್ಕೆ ಸೋಮವಾರ ತಿಳಿಸಿದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 420 ವಿಕೆಟ್ ಕಬಳಿಸಿರುವ ದಿಂಡಾ ಭಾರತ ತಂಡದಲ್ಲಿ 13 ಏಕದಿನ ಮತ್ತು ಒಂಬತ್ತು ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 12 ಮತ್ತು 17 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲೂ ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.