ADVERTISEMENT

ಏಷ್ಯಾ ಕಪ್: ಭಾರತದ ವಿರುದ್ಧ ಟಾಸ್‌ ಗೆದ್ದ ಹಾಂಕಾಂಗ್ ಬೌಲಿಂಗ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 11:56 IST
Last Updated 18 ಸೆಪ್ಟೆಂಬರ್ 2018, 11:56 IST
ಭಾರತದ ವಿರುದ್ಧ ಟಾಸ್‌ ಗೆದ್ದ ಹಾಂಕಾಂಗ್
ಭಾರತದ ವಿರುದ್ಧ ಟಾಸ್‌ ಗೆದ್ದ ಹಾಂಕಾಂಗ್    

ದುಬೈ: ಇಲ್ಲಿನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಹಾಂಕಾಂಗ್ ತಂಡಗಳು ಎದುರಾಗಲಿವೆ.

ಸದ್ಯ ಭಾರತ ವಿರುದ್ಧ ಟಾಸ್ ಗೆದ್ದಿರುವ ಹಾಂಕಾಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಹಾಂಕಾಂಗ್‌ಗೆ ಇದು ಎರಡನೇ ಪಂದ್ಯವಾಗಿದ್ದು, ಸೋಮವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲಿನ ಕಹಿ ಉಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ತಂಡ 116 ರನ್‌ ಸೇರಿಸಿತ್ತು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು.

ಇದನ್ನೂ ಓದಿ:ಏಷ್ಯಾ ಕಪ್‌ ಏಕದಿನ ಕ್ರಿಕೆಟ್ ಟೂರ್ನಿ: ಪಾಕ್ ದಾಳಿಗೆ ಬೆದರಿದ ಹಾಂಕಾಂಗ್‌

ಇನ್ನು ಬುಧವಾರ ಭಾರತ ತಂಡ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಪಾಕಿಸ್ತಾನದ ಜೊತೆ ಕಣಕ್ಕಿಳಿಯಲಿದೆ.

ಇದನ್ನೂ ಓದಿ :ಪಾಕ್‌ ಎದುರಿನ ಪಂದ್ಯಕ್ಕೆ ಇಂದು ‘ಅಭ್ಯಾಸ’

ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್‌, ಕೆ.ಎಲ್‌.ರಾಹುಲ್‌, ಅಂಬಟಿ ರಾಯುಡು, ಮನೀಶ್‌ ಪಾಂಡೆ, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್‌), ಹಾರ್ದಿಕ್ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಶಾರ್ದೂಲ್ ಠಾಕೂರ್‌, ದಿನೇಶ್‌ ಕಾರ್ತಿಕ್‌, ಖಲೀಲ್‌ ಅಹಮ್ಮದ್‌.

ಹಾಂಕಾಂಗ್‌: ಅನ್ಶುಮನ್ ರಥ್‌ (ನಾಯಕ), ಏಜಾಜ್‌ ಖಾನ್‌, ಬಾಬರ್ ಹಯಾತ್‌, ಕ್ಯಾಮರಾನ್ ಮೆಕಲ್ಸನ್‌, ಕ್ರಿಸ್ಟೋಫರ್ ಕಾರ್ಟರ್‌, ಎಹ್ಸಾನ್‌ ಖಾನ್‌, ಎಹ್ಸಾನ್‌ ನವಾಜ್‌, ಅರ್ಷದ್ ಮೊಹಮ್ಮದ್‌, ಕಿಂಚಿತ್ ಶಾ, ನದೀಮ್ ಅಹಮ್ಮದ್‌, ರಾಗ್‌ ಕಪೂರ್‌, ಸ್ಕಾಟ್‌ ಮೆಕೆನಿ, ತನ್ವೀರ್ ಅಹಮ್ಮದ್‌ ತನ್ವೀರ್ ಅಫ್ಸಲ್‌, ವಖಾಸ್ ಖಾನ್‌, ಅಫ್ತಾಬ್‌ ಹುಸೇನ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.