ADVERTISEMENT

ಏಷ್ಯಾ ಕಪ್‌ ಕ್ರಿಕೆಟ್‌: ಸೆಹ್ವಾಗ್, ಶಾಸ್ತ್ರಿ ಸೇರಿ ದಿಗ್ಗಜರಿಂದ ವೀಕ್ಷಕ ವಿವರಣೆ

ಪಿಟಿಐ
Published 8 ಸೆಪ್ಟೆಂಬರ್ 2025, 9:43 IST
Last Updated 8 ಸೆಪ್ಟೆಂಬರ್ 2025, 9:43 IST
   

ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟಿಗರಾದ ಸುನಿಲ್‌ ಗವಾಸ್ಕರ್‌, ರವಿ ಶಾಸ್ತ್ರಿ ಹಾಗೂ ವೀರೇಂದ್ರ ಸೆಹ್ವಾಗ್‌ ಅವರು ಮಂಗಳವಾರ(ಸೆ.09) ಆರಂಭವಾಗಲಿರುವ ಏಷ್ಯಾ ಕಪ್‌ ಟಿ–20 ಟೂರ್ನಿಗೆ ವೀಕ್ಷಕ ವಿವರಣೆಗಾರರಾಗಿ ಆಯ್ಕೆಯಾಗಿದ್ದಾರೆ.

17ನೇ ಆವೃತ್ತಿಯ ಏಷ್ಯಾ ಕಪ್‌ ಟೂರ್ನಿಯು ‘ಯುಎಇ’ಯಲ್ಲಿ ಜರುಗಲಿದ್ದು, ಭಾರತ ಸೇರಿದಂತೆ 8 ತಂಡಗಳು ಭಾಗವಹಿಸಲಿವೆ. ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ ವಾಹಿನಿಯಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.

ಭಾರತದ ಮಾಜಿ ಕ್ರಿಕೆಟಿಗರಾದ ಸೆಹ್ವಾಗ್‌, ಇರ್ಫಾನ್‌ ಪಠಾಣ್‌, ಅಜಯ್‌ ಜಡೇಜಾ, ಅಭಿಷೇಕ್‌ ನಾಯರ್‌ ಅವರು ಹಿಂದಿ ವೀಕ್ಷಕ ವಿವರಣೆ ಮಾಡಲಿದ್ದಾರೆ.

ADVERTISEMENT

ಭಾರತದ ಮಾಜಿ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಅವರು ತಮಿಳು ವೀಕ್ಷಕ ವಿವರಣೆಗಾರರಾಗಿ ಆಯ್ಕೆಯಾಗಿದ್ದಾರೆ.

ಸಂಜಯ್‌ ಮಾಂಜ್ರೇಕರ್‌, ರಾಬಿನ್‌ ಉತ್ತಪ್ಪ, ವಕಾರ್‌ ಯೂನಿಸ್‌, ವಾಸಿಮ್‌ ಅಕ್ರಮ್‌, ಸೈಮನ್‌ ಡುಯೆಲ್‌ ಕೂಡ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡವು ಯುಎಇ ಎದುರು ಬುಧವಾರ(ಸೆ.10) ಮೊದಲ ಪಂದ್ಯವಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.