ಒಮನ್ ತಂಡದ ನಾಯಕ ಜತೀಂದರ್ ಸಿಂಗ್
ಎಎಫ್‌ಪಿ ಸಂಗ್ರಹ ಚಿತ್ರ
ಮಸ್ಕಟ್: ಭಾರತೀಯ ಮೂಲದ ಜತೀಂದರ್ ಸಿಂಗ್ ಅವರು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಮನ್ ತಂಡವನ್ನು ಮುನ್ನಡೆಸಲಿದ್ದಾರೆ.
ಯುಎಇಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಮನ್ ತಂಡವು ಎ ಗುಂಪಿನಲ್ಲಿ ಆಡಲಿದೆ. ಈ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೂ ಇವೆ. ಜತೀಂದರ್ ಸಿಂಗ್ ಬಳಗದಲ್ಲಿ ಒಟ್ಟು 17 ಆಟಗಾರರಿದ್ದಾರೆ. ತಂಡದಲ್ಲಿ ನಾಲ್ವರು ಅನ್‌ಕ್ಯಾಪ್ಡ್ ಆಟಗಾರರಾದ ಸೂಫಿಯಾನ್ ಯೂಸುಫ್, ಝಿಕ್ರಿಯಾ ಇಸ್ಲಾಂ, ಫೈಸಲ್ ಶಾ ಮತ್ತು ನದೀಮ್ ಖಾನ್ ಅವರಿದ್ದಾರೆ.
‘ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ತಂಡಗಳ ಎದುರು ಆಡುವುದು ನಮ್ಮ ಬಳಗಕ್ಕೆ ಉತ್ತಮ ಅನುಭವ ನೀಡಲಿದೆ. ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಫಲಿತಾಂಶ ಯಾವುದೇ ಕಡೆಗೂ ವಾಲಬಹುದು. ಆದ್ದರಿಂದ ಸಂಪೂರ್ಣ ಸಾಮರ್ಥ್ಯ ಒರೆಗೆ ಹಚ್ಚುವುದು ಮುಖ್ಯ’ ಎಂದು ಒಮನ್ ತಂಡದ ಕೋಚ್ ದುಲೀಪ್ ಮೆಂಡಿಸ್ ಹೇಳಿದ್ದಾರೆ.
ತಂಡ: ಜತೀಂದರ್ ಸಿಂಗ್ (ನಾಯಕ), ಹಮದ್ ಮಿರ್ಜಾ (ವಿಕೆಟ್‌ಕೀಪರ್), ವಿನಾಯಕ ಶುಕ್ಲಾ (ವಿಕೆಟ್‌ಕೀಪರ್), ಸೂಫಿಯಾನ್ ಯೂಸುಫ್, ಆಶಿಶ್ ಒಡೆದೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಂ, ಸೂಫಿಯಾನ್ ಮೆಹಮೂದ್, ಆರ್ಯನ್ ಬಿಷ್ತ್, ಕರಣ್ ಸೋನಾವಳೆ, ಝಿಕ್ರಿಯಾ ಇಸ್ಲಾಂ, ಹಸ್ನೈನ್ ಅಲಿ ಶಾ, ಫೈಸಲ್ ಶಾ, ಮೊಹಮ್ಮದ್ ಇಮ್ರಾನ್, ನದೀಂ ಖಾನ್, ಶಕೀಲ್ ಅಹಮದ್, ಸಮಯ್ ಶ್ರೀವಾಸ್ತವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.