ಟ್ರೋಫಿ
ಪಿಟಿಐ ಚಿತ್ರ
ದುಬೈ: ಪಾಕಿಸ್ತಾನ ತಂಡದ ಎದುರಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಗೆದ್ದ ಭಾರತ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹಸೀನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲಿಲ್ಲ.
ಭಾನುವಾರ ತಡರಾತ್ರಿ ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಯಿತು. ಪೂರ್ವನಿಗದಿಯಂತೆ ನಖ್ವಿ ಅವರೇ ಟ್ರೋಫಿ ಪ್ರದಾನ ಮಾಡಲು ಸಿದ್ಧರಾಗಿದ್ದರು. ಎಸಿಸಿ ಅಧ್ಯಕ್ಷರಾಗಿ ನಖ್ವಿ ಅವರು ಪ್ರಶಸ್ತಿ ಪ್ರದಾನ ಮಾಡುವುದು ಶಿಷ್ಟಾಚಾರ.
ಆದರೆ ಅವರು ಪಾಕ್ ಸರ್ಕಾರದಲ್ಲಿ ಸಚಿವರಾಗಿ ಭಾರತ ವಿರೋಧಿ ನಿಲುವು ಹೊಂದಿದ್ದಾರೆ. ಈ ಹಿಂದೆಯೂ ಅವರು ಭಾರತದ ಎದುರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.