ADVERTISEMENT

ಏಷ್ಯಾ ಕಪ್ ಟಿ20 ವೇಳಾಪಟ್ಟಿ ಪ್ರಕಟ: ಆಗಸ್ಟ್ 28ಕ್ಕೆ ಭಾರತ–ಪಾಕಿಸ್ತಾನ ಮುಖಾಮುಖಿ

ಪಿಟಿಐ
Published 2 ಆಗಸ್ಟ್ 2022, 15:54 IST
Last Updated 2 ಆಗಸ್ಟ್ 2022, 15:54 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ದುಬೈ: ಏಷ್ಯಾ ಕಪ್ ಟಿ–20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ಸೆಣಸಲಿವೆ ಎಂದು ಏಷಿಯನ್ ಕ್ರಿಕೆಟ್ ಮಂಡಳಿಯ(ಎಸಿಸಿ) ಅಧ್ಯಕ್ಷ ಜಯ್ ಶಾ ಘೋಷಿಸಿದ್ದಾರೆ.

ಏಷ್ಯಾ ಕಪ್‌ಗೆ ಆಯ್ಕೆ ಮಾಡಲಾಗುವ ಭಾರತ ತಂಡದಲ್ಲಿ ಯಾವುದೇ ಗಾಯದ ಸಮಸ್ಯೆ ಕಂಡುಬರದಿದ್ದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿಯೂ ಅದೇ ತಂಡ ಆಡಲಿದೆ ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಬಿಸಿಸಿಐ ಕಾರ್ಯದರ್ಶಿ ಶಾ, ಶ್ರೀಲಂಕಾದಿಂದ ದುಬೈಗೆ ಸ್ಥಳಾಂತರಿಸಲ್ಪಟ್ಟ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದರು.

ADVERTISEMENT

‘ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಏಷ್ಯಾ ಕಪ್ ಕಾದಾಟವು ಆಗಸ್ಟ್ 27ರಿಂದ ಆರಂಭವಾಗಲಿದೆ. ಫೈನಲ್ ಸೆಪ್ಟೆಂಬರ್ 11ರಂದು ನಡೆಯಲಿದೆ. ಏಷ್ಯಾ ಕಪ್‌ನ 15ನೇ ಆವೃತ್ತಿಯು ಟಿ–20 ವಿಶ್ವಕಪ್‌ಗೆ ಒಂದೊಳ್ಳೆ ಪೂರ್ವ ತಯಾರಿಯಾಗಲಿದೆ’ ಎಂದು ಶಾ ಟ್ವೀ ಮಾಡಿದ್ದಾರೆ.

ಏಷ್ಯಾ ಕಪ್‌ ಸರಣಿಯ ಗ್ರೂಪ್–ಎನಲ್ಲಿ ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ(ಇನ್ನಷ್ಟೆ ನಿರ್ಧಾರವಾಗಬೇಕಿದೆ) ಮತ್ತು ಗ್ರೂಪ್ ಬಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ತಂಡಗಳು ಇವೆ.

ಒಟ್ಟು 13 ಪಂದ್ಯಗಳು ನಡೆಯಲಿದ್ದು, 10 ಪಂದ್ಯಗಳು ದುಬೈನಲ್ಲಿ ಮತ್ತು 3 ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿವೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳಾ ಪಟ್ಟಿ

ಶನಿವಾರ, ಆಗಸ್ಟ್ 27:ಶ್ರೀಲಂಕಾ vs ಅಫ್ಗಾನಿಸ್ತಾನ (ದುಬೈ)

ಭಾನುವಾರ, ಆಗಸ್ಟ್ 28: ಭಾರತ vs ಪಾಕಿಸ್ತಾನ (ದುಬೈ)

ಮಂಗಳವಾರ, ಆಗಸ್ಟ್ 30: ಬಾಂಗ್ಲಾದೇಶ vs ಅಫ್ಗಾನಿಸ್ತಾನ (ಶಾರ್ಜಾ)

ಬುಧವಾರ, ಆಗಸ್ಟ್ 31: ಭಾರತ ವಿರುದ್ಧ ಕ್ವಾಲಿಫೈಯರ್ (ದುಬೈ)

ಗುರುವಾರ, ಸೆಪ್ಟೆಂಬರ್ 1 : ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ (ದುಬೈ)

ಶುಕ್ರವಾರ, ಸೆಪ್ಟೆಂಬರ್ 2 : ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್ (ಶಾರ್ಜಾ)

ಸೂಪರ್ ಫೋರ್ ಹಂತ

ಶನಿವಾರ, ಸೆಪ್ಟಂಬರ್ 3: ಬಿ1 vs ಬಿ2 (ಶಾರ್ಜಾ)

ಭಾನುವಾರ, ಸೆಪ್ಟೆಂಬರ್ 4:ಎ1 ವಿರುದ್ಧ ಎ2 (ದುಬೈ)

ಮಂಗಳವಾರ, ಸೆಪ್ಟೆಂಬರ್ 6 : ಎ1 vs ಬಿ1 (ದುಬೈ)

ಬುಧವಾರ, ಸೆಪ್ಟೆಂಬರ್ 7:ಎ2 ವಿರುದ್ಧ ಬಿ2 (ದುಬೈ)

ಗುರುವಾರ, ಸೆಪ್ಟೆಂಬರ್ 8: ಎ1 ವಿರುದ್ಧ ಬಿ2 (ದುಬೈ)

ಶುಕ್ರವಾರ, ಸೆಪ್ಟೆಂಬರ್ 9: ಬಿ1 ವಿರುದ್ಧ ಎ2 (ದುಬೈ)

ಭಾನುವಾರ, ಸೆಪ್ಟೆಂಬರ್.11: ಫೈನಲ್ (ದುಬೈ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.