ಆಸಿಫ್ ಅಫ್ರಿದಿಗೆ ಕ್ಯಾಪ್ ನೀಡುತ್ತಿರುವ ವೇಗದ ಬೌಲರ್ ಶಾಹಿನ್ ಅಫ್ರಿದಿ
ಕೃಪೆ: @Aryaseen5911
ರಾವಲ್ಪಿಂಡಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ 6 ತಿಂಗಳು ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸಿಫ್ ಅಫ್ರಿದಿ ಅವರಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಅವಕಾಶ ನೀಡಲಾಗಿದೆ.
39 ವರ್ಷದ ಈ ಆಟಗಾರ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಪಂದ್ಯವು ರಾವಲ್ಪಿಂಡಿಯಲ್ಲಿ ಇಂದು (ಅಕ್ಟೋಬರ್ 20) ಆರಂಭವಾಗಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ನೊಮನ್ ಅಲಿ ಅವರಿಗೆ ಅಫ್ರಿದಿ ಸಾಥ್ ನೀಡಲಿದ್ದಾರೆ.
ನಿಷೇಧಕ್ಕೊಳಗಾಗಿದ್ದ ಅಫ್ರಿದಿ
ದೇಶಿ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಅಫ್ರಿದಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಆದರೆ, ಶಿಕ್ಷೆಯ ಅವಧಿ ಮುಗಿಯಲು ಇನ್ನೂ ಆರು ತಿಂಗಳು ಇರುವಂತೆಯೇ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದಾಗ್ಯೂ, ಅವರ ಮೇಲಿನ ನಿಷೇಧ ಸಡಿಲಿಸಿದ್ದೇಕೆ ಎಂಬುದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿಲ್ಲ.
ಎಡಗೈ ಸ್ಪಿನ್ನರ್ ಆಗಿರುವ ನೊಮನ್ ಅಲಿ ಲಾಹೋರ್ ಟೆಸ್ಟ್‌ನಲ್ಲಿ ಯಶಸ್ಸು ಗಳಿಸಿದ್ದೇ ಅಫ್ರಿದಿ ಆಯ್ಕೆಗೆ ಕಾರಣ ಎನ್ನಲಾಗಿದೆ. ಅವರು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಪಾಕ್ ಪಡೆ 93 ರನ್ ಜಯ ಸಾಧಿಸಲು ನೆರವಾಗಿದ್ದರು.
ಪಾಕಿಸ್ತಾನ ತಂಡದಲ್ಲಿ ಸ್ಪಿನ್ನರ್‌ಗಳಿಗೆ ಮಣೆ ಹಾಕಲಾಗಿದೆ. ಶಾಹಿನ್ ಅಫ್ರಿದಿ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿರುವ ಏಕೈಕ ವೇಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.