ADVERTISEMENT

ಕೆ.ಎಲ್‌.ರಾಹುಲ್ ಜನ್ಮದಿನಕ್ಕೆ ಅಥಿಯಾ ಶೆಟ್ಟಿ ವಿಶ್ ಮಾಡಿದ್ದು ಹೀಗೆ...

ಇಬ್ಬರ ಪ್ರೇಮಕ್ಕೆ ಮತ್ತೊಂದು ಪುರಾವೆ

ಏಜೆನ್ಸೀಸ್
Published 18 ಏಪ್ರಿಲ್ 2020, 13:03 IST
Last Updated 18 ಏಪ್ರಿಲ್ 2020, 13:03 IST
ರಾಹುಲ್ ಹುಟ್ಟುಹಬ್ಬದ ನಿಮಿತ್ತ ಇನ್‌ಸ್ಟಾಗ್ರಾಂನಲ್ಲಿ ಅಥಿಯಾ ಶೇರ್ ಮಾಡಿರುವ ಚಿತ್ರ
ರಾಹುಲ್ ಹುಟ್ಟುಹಬ್ಬದ ನಿಮಿತ್ತ ಇನ್‌ಸ್ಟಾಗ್ರಾಂನಲ್ಲಿ ಅಥಿಯಾ ಶೇರ್ ಮಾಡಿರುವ ಚಿತ್ರ   

ಬೆಂಗಳೂರು: ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ತಾರೆ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ನಡುವಣ ‘ಸ್ನೇಹ’ದ ಕುರಿತು ಈಗಾಗಲೇ ಬಹಳಷ್ಟು ಸುದ್ದಿಯಾಗಿದೆ. ಇವರಿಬ್ಬರೂ ಪ್ರೇಮಿಸುತ್ತಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿಯೂ ಸುದ್ದಿಯಾಗಿತ್ತು. ಇದಕ್ಕೆ, ಅಥಿಯಾ ಹಾಗೂ ರಾಹುಲ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಫೋಟೊಗಳೂ ಪುಷ್ಟಿ ನೀಡಿದ್ದವು.

ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗಳಿಗೆ ಇದೀಗ ಮತ್ತೊಂದು ಪುರಾವೆ ದೊರೆತಿದೆ. ರಾಹುಲ್ ಹುಟ್ಟುಹಬ್ಬದ ನಿಮಿತ್ತ ಇನ್‌ಸ್ಟಾಗ್ರಾಂನಲ್ಲಿ ತಾವಿಬ್ಬರೂ ಜತೆಯಾಗಿರುವ ಫೋಟೊವೊಂದನ್ನು ಶೇರ್ ಮಾಡಿರುವ ಅಥಿಯಾ, ‘ನನ್ನವನಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಅಥಿಯಾ ಸಂದೇಶ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 3 ಲಕ್ಷ ಜನ ಲೈಕ್ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

2019ರಲ್ಲಿ ಅಥಿಯಾ ಶೆಟ್ಟಿ ಹುಟ್ಟುಹಬ್ಬಕ್ಕೆ ತಾವಿಬ್ಬರು ಕೆಫೆಯೊಂದರಲ್ಲಿ ಜೊತೆಗಿರುವ ಪೋಟೊ ಹಂಚಿಕೊಳ್ಳುವ ಮೂಲಕ ರಾಹುಲ್ ಶುಭಾಶಯ ಕೋರಿದ್ದರು. 2020ರ ಜನವರಿಯಲ್ಲಿ ರಾಹುಲ್ ಇನ್‍ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರವೊಂದಕ್ಕೆ ಅಥಿಯಾ ಅವರೇ ‘ಹೃದಯ’ ಗುರುತಿನ ಎಮೊಜಿ ಮೂಲಕ ಪ್ರತಿಕ್ರಿಯಿಸಿದ್ದು ಭಾರಿ ಸುದ್ದಿಯಾಗಿತ್ತು. ಈ ಚಿತ್ರಕ್ಕೆ ಅಥಿಯಾ ತಂದೆ ಸುನೀಲ್ ಶೆಟ್ಟಿಯವರೂ ನಗುವ ಎಮೊಜಿ ಮೂಲಕ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.