ADVERTISEMENT

ಆಸ್ಟ್ರೇಲಿಯಾಕ್ಕೆ ‘ಸೂಪರ್’ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 18:00 IST
Last Updated 13 ಫೆಬ್ರುವರಿ 2022, 18:00 IST
ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ –ಎಎಫ್‌ಪಿ ಚಿತ್ರ
ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ –ಎಎಫ್‌ಪಿ ಚಿತ್ರ   

ಸಿಡ್ನಿ: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ಎದುರು ಜಯ ಗಳಿಸಿತು. ಇಲ್ಲಿ ನಡೆದ ಎರಡನೇ ಟಿ20 ಪಂದ್ಯ ಸೂಪರ್ ಓವರ್‌ನಲ್ಲಿ ಕೊನೆಗೊಂಡಿತು.

ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ತಂಡವು ಜಯಭೇರಿ ಬಾರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 164 ರನ್‌ ಗಳಿಸಿತು. ಅದಕ್ಕುತ್ತರವಾಗಿ ಶ್ರೀಲಂಕಾ ತಂಡವು ಪಥುಮ್ ನಿಸಾಂಕ (73) ಅವರ ಅಮೋಘ ಅರ್ಧಶತಕ ಬಲದಿಂದ ಸಮಬಲ ಸಾಧಿಸಿತು.

ADVERTISEMENT

ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2–0 ಮುನ್ನಡೆ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 6ಕ್ಕೆ 164 (ಆ್ಯರನ್ ಫಿಂಚ್ 25, ಜೋಶ್ ಇಂಗ್ಲಿಸ್ 48, ಮಾರ್ಕಸ್ ಸ್ಟೋಯಿನಿಸ್ 19, ಚಾಮಿರಾ 30ಕ್ಕೆ2, ವಣಿಂದು ಹಸರಂಗಾ33ಕ್ಕೆ 2), ಶ್ರೀಲಂಕಾ: 20 ಓವರ್‌ಗಳಲ್ಲಿ 8ಕ್ಕೆ164 (ಪಥುಮ್ ನಿಸಾಂಕ 73, ದಸುನ್ ಶನಾಕ 34, ಜೋಶ್ ಹ್ಯಾಜಲ್‌ವುಡ್ 22ಕ್ಕೆ3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ ಸೂಪರ್ ಓವರ್‌ನಲ್ಲಿ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.