ADVERTISEMENT

ಆ್ಯಷಸ್‌ ಟೆಸ್ಟ್‌: ಸ್ಟೀವ್‌ ಸ್ಮಿತ್‌ ಮೇಲೆ ನಿರೀಕ್ಷೆ

ಏಜೆನ್ಸೀಸ್
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
ಸ್ಟೀವ್‌ ಸ್ಮಿತ್‌
ಸ್ಟೀವ್‌ ಸ್ಮಿತ್‌    

ಲೀಡ್ಸ್‌: ಆ್ಯಷಸ್‌ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಕೈಲಿ ಆಘಾತಕಾರಿ ರೀತಿಯಲ್ಲಿ ಸೋಲನ್ನುಂಡ ಆಸ್ಟ್ರೇಲಿಯಾ ಈಗ, ಅನುಭವಿ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಮೇಲೆ ನಿರೀಕ್ಷೆಯಿಟ್ಟುಕೊಂಡಿದೆ. ಸ್ಮಿತ್‌ ಗಾಯಾಳಾಗಿ ಹಿಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು.

ಲಾರ್ಡ್ಸ್‌ನಲ್ಲಿ ನಡೆ ದಿದ್ದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ ವೇಳೆ ಜೋಫ್ರಾ ಆರ್ಚರ್ ಬೌನ್ಸರ್‌ನಲ್ಲಿ ಚೆಂಡು ಅವರ ಕತ್ತಿಗೆ ಬಡಿದಿದ್ದರಿಂದ ನೋವು ಅನುಭವಿಸಿದ್ದರು. ನಾಲ್ಕನೇ ಟೆಸ್ಟ್‌ಗೆ ಅವರು ಆಡಲು ಅರ್ಹರಾಗುವರು ಎಂಬ ವಿಶ್ವಾಸವನ್ನು ಆಸ್ಟ್ರೇಲಿಯಾ ತಂಡ ಹೊಂದಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT