ADVERTISEMENT

ಕಾಂಗರೂ ಪ‍ಡೆ ರಕ್ಷಕನಾದ ನತಾನ್‌ ಕೌಲ್ಟರ್‌ನೈಲ್‌: ವಿಂಡೀಸ್‌ಗೆ 289 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 13:28 IST
Last Updated 6 ಜೂನ್ 2019, 13:28 IST
   

ನಾಟಿಂಗಂ(ಇಂಗ್ಲೆಂಡ್‌):ಟ್ರೆಂಟ್‌ಬ್ರಿಜ್‌ನಲ್ಲಿ ಗುರುವಾರ ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಪಂದ್ಯ ಆರಂಭವಾಗಿದೆ. ಟಾಸ್‌ ಗೆದ್ದಿರುವ ವೆಸ್ಟ್ ಇಂಡೀಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು ಕಾಂಗರೂ ಪಡೆಗೆ ಆರಂಭಿಕ ಆಘಾತ ನೀಡಿದೆ.

ಸ್ಕೋರ್‌ ವಿವರ:https://bit.ly/2wEHX9y

ಪಂದ್ಯದ ದಿಕ್ಕನ್ನೇ ಬದಲಿಸಿದ್ದು ನತಾನ್‌ ಕೌಲ್ಟರ್‌ನೈಲ್‌ ಬಿರುಸಿನ ಆಟ. 60ಎಸೆತಗಳಲ್ಲಿ 92ರನ್‌ ಗಳಿಸಿದಕೌಲ್ಟರ್‌ನೈಲ್‌, ನಾಲ್ಕು ಭರ್ಜರಿ ಸಿಕ್ಸರ್‌ ಹಾಗೂ 8ಬೌಂಡರಿ ಸಿಡಿಸಿದರು. 49ಓವರ್‌ಗಳಲ್ಲಿ ಆಸ್ಟ್ರೇಲಿಯಾ ಎಲ್ಲವಿಕೆಟ್‌ ಕಳೆದುಕೊಂಡು288ರನ್‌ಗಳಿಸಿತು. ಆ್ಯಂಡ್ರೆ ರಸೆಲ್‌,ಶೆಲ್ಡನ್‌ ಕಾರ್ಟ್‌ರೆಲ್‌ ಹಾಗೂಒಶಾನೆ ತಲಾ 2 ವಿಕೆಟ್‌ ಪಡೆದರು.

ADVERTISEMENT

ತರಗೆಲೆಗಳಂತೆ ಆಸ್ಟ್ರೇಲಿಯಾಬ್ಯಾಟ್ಸ್‌ಮನ್‌ಗಳು ಮೈದಾನದಿಂದ ಹೊರನಡೆದರೆ,ಸ್ಟೀವ್‌ ಸ್ಮಿತ್‌(42)ಮತ್ತುಅಲೆಕ್ಸ್‌ ಕ್ಯಾರೆ(45) ಕೆರೀಬಿಯನ್‌ ಬೌಲರ್‌ಗಳ ಬಿರುಗಾಳಿಗೆಉರುಳದಂತೆ ಗಟ್ಟಿಯಾಗಿ ಆಟ ಮುಂದುವರಿಸಿದರು. ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸುವಲ್ಲಿ ಇಬ್ಬರ ಜೊತೆಯಾಟ ಸಹಕಾರಿಯಾಯಿತು.

ಆ್ಯಂಡ್ರೆ ರಸೆಲ್‌ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದು, ಆಸ್ಟ್ರೇಲಿಯಾ ಬಹುಬೇಗ ಕುಸಿಯುವ ಭೀತಿ ಮತ್ತೆ ಎದುರಾಗಿತ್ತು.ಅರ್ಧ ಶತಕ ಗಳಿಸಿದಸ್ಟೀವ್‌ ಸ್ಮಿತ್‌(73)ಮತ್ತು ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವನತಾನ್‌ ಕೌಲ್ಟರ್‌ನೈಲ್‌ಆಟದಿಂದ ತಂಡ ಗೌರವಯುತ ರನ್‌ ತಲುಪಿದೆ.

ಆ್ಯರನ್‌ ಫಿಂಚ್‌ ಮತ್ತು ಡೇವಿಡ್‌ ವಾರ್ನರ್‌ ಜೋಡಿಯಿಂದ ದೊಡ್ಡ ಮೊತ್ತದ ಜೊತೆಯಾಟದ ನಿರೀಕ್ಷೆಯಲ್ಲಿದ್ದವರಿಗೆ ಒಶಾನೆ ಥಾಮಸ್‌ ಎಸೆತದಿಂದ ನಿರಾಸೆ ಉಂಟಾಗಿದೆ.ಒಶಾನೆ ತನ್ನ ಎರಡನೇ ಓವರ್‌ನಲ್ಲಿ ಫಿಂಚ್‌(6) ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಸಫಲರಾದರು. ಇದರ ಬೆನ್ನಲೇಶೆಲ್ಡನ್‌ ಕಾರ್ಟ್‌ರೆಲ್‌ ಅವರುಡೇವಿಡ್‌ ವಾರ್ನರ್‌(3) ವಿಕೆಟ್‌ ಪಡೆದು ಸಂಭ್ರಮಿಸಿದರು.

ಬಹುಬೇಗ ಎರಡು ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾಗುವಂತೆ ಕಂಡುಬಂದಉಸ್ಮಾನ್‌ ಕ್ವಾಜಾ(13) ಸಹ ಕ್ಯಾಚ್ ನೀಡಿ ಮೈದಾನದಿಂದ ಹೊರನಡೆದರು. ತನ್ನ ಮೊದಲ ಓವರ್‌ನಲ್ಲಿಯೇಆ್ಯಂಡ್ರೆ ರಸೆಲ್‌ ವಿಕೆಟ್‌ ಗಳಿಸಿ ಗಮನ ಸೆಳೆದರು.

ಶೆಲ್ಡನ್‌ ಕಾರ್ಟ್‌ರೆಲ್‌ ಆಸ್ಟ್ರೇಲಿಯಾ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು,ಗ್ಲೆನ್‌ ಮ್ಯಾಕ್ಸ್‌ವೆಲ್‌(0) ರನ್‌ ಖಾತೆ ತೆರೆಯುವ ಮುನ್ನವೇ ವಿಕೆಟ್‌ ಕಬಳಿಸಿದ್ದಾರೆ. ತಂಡದ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿರುವ ಆಸ್ಟ್ರೇಲಿಯಾ ಗೌರವಯುತ ಮೊತ್ತ ಗಳಿಸಲುಸ್ಟೀವ್‌ ಸ್ಮಿತ್‌ ಮತ್ತುಮಾರ್ಕಸ್‌ ಸ್ಟೊಯಿನಿಸ್‌ ಆಟದ ಮೇಲೆ ಒತ್ತಡವಿತ್ತು. ವಿಂಡೀಸ್‌ ಬೌಲರ್‌ಗಳನ್ನು ಇಬ್ಬರೂ ಆಟಗಾರರೂ ದಿಟ್ಟತನದಲ್ಲಿ ಎದುರಿಸಿದರು. ಆದರೆ, ನಾಲ್ಕು ಬೌಂಡರಿ ಸಹಿತ 19 ರನ್‌ ಗಳಿಸಿದ್ದ ಮಾರ್ಕಸ್‌ ಸ್ಟೊಯಿನಿಸ್‌ ಆಟಕ್ಕೆಜೇಸನ್‌ ಹೋಲ್ಡರ್‌ ಕಡಿವಾಣ ಹಾಕಿದರು.

ಇಂದಿನ ಪಂದ್ಯ ವೆಸ್ಟ್ ಇಂಡೀಸ್‌ ಪಾಲಿಗೆ 800ನೇ ಏಕದಿನ ಪಂದ್ಯವಾಗಿದೆ.

ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವು ಸಾಧಿಸಿ ವಿಶ್ವಾಸದಲ್ಲಿವೆ.ಕೆರೀಬಿಯನ್‌ ವೇಗದ ಪಡೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಹಾಗೂ ಆಸ್ಟ್ರೇಲಿಯಾ ತಂಡವು ಅಫ್ಗಾನಿಸ್ತಾನದ ವಿರುದ್ಧ ಜಯಗಳಿಸಿತ್ತು.ಕಳೆದ ವರ್ಷ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ಎದುರು 481 ರನ್‌ ಗಳಿಸಿದ್ದ ಇಂಗ್ಲೆಂಡ್‌, ಅತ್ಯಧಿಕ ರನ್‌ ದಾಖಲೆಯೊಂದಿಗೆ ಗೆಲುವು ಪಡೆದಿತ್ತು.

ತಂಡಗಳು ಇಂತಿವೆ

ಆಸ್ಟ್ರೇಲಿಯಾ:ಆ್ಯರನ್‌ ಫಿಂಚ್‌ (ನಾಯಕ), ಜೇಸನ್‌ ಬೆಹ್ರನ್‌ಡಾಫ್‌, ಅಲೆಕ್ಸ್‌ ಕ್ಯಾರೆ, ನತಾನ್‌ ಕೌಲ್ಟರ್‌ನೈಲ್‌, ಪ್ಯಾಟ್‌ ಕಮಿನ್ಸ್‌, ಉಸ್ಮಾನ್‌ ಕ್ವಾಜಾ, ನತಾನ್‌ ಲಯನ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೇನ್‌ ರಿಚರ್ಡ್‌ಸನ್‌, ಸ್ಟೀವ್‌ ಸ್ಮಿತ್‌, ಮಿಷೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೊಯಿನಿಸ್‌, ಡೇವಿಡ್‌ ವಾರ್ನರ್‌, ಆ್ಯಂಡಂ ಜಂಪಾ.

ವೆಸ್ಟ್‌ ಇಂಡೀಸ್‌:ಜೇಸನ್‌ ಹೋಲ್ಡರ್‌ (ನಾಯಕ), ಫ್ಯಾಬ್ಲಾನ್ ಆ್ಯಲನ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಡ್ಯಾರೆನ್‌ ಬ್ರಾವೊ, ಶೆಲ್ಡನ್‌ ಕಾರ್ಟ್‌ರೆಲ್‌, ಶಾನನ್‌ ಗೇಬ್ರಿಯಲ್‌, ಕ್ರಿಸ್‌ ಗೇಲ್‌, ಶಿಮ್ರಾನ್‌ ಹೆಟ್ಮೆಯರ್‌, ಶಾಯ್‌ ಹೋಪ್‌, ಎವಿನ್‌ ಲೂಯಿಸ್‌, ಆ್ಯಶ್ಲೆ ನರ್ಸ್‌, ನಿಕೋಲಸ್‌ ಪೂರನ್‌, ಕೇಮರ್‌ ರೋಚ್‌, ಆ್ಯಂಡ್ರೆ ರಸೆಲ್‌, ಒಶಾನೆ ಥಾಮಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.