ಜೈಸ್ವಾಲ್
ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 2ನೇ ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡ 310 ರನ್‌ಗಳ ಹಿನ್ನಡೆಯಲ್ಲಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಈ ಮೂಲಕ ಭಾರತ 310 ರನ್‌ಗಳ ಹಿನ್ನಡೆಯಲ್ಲಿದೆ. ಬಾರತೀಯ ಬ್ಯಾಟರ್‌ಗಳ ಕಳಪೆ ಸಾಧನೆ ಮತ್ತೆ ಮುಂದುವರಿದಿದೆ. ಜೈಸ್ವಾಲ್ 80 ರನ್‌ಗಳಿಸುವ ಮೂಲಕ ಭಾರತಕ್ಕೆ ಆಸರೆಯಾದರು. ರೋಹಿತ್ ಶರ್ಮಾ ಅವರು ತಂಡಕ್ಕೆ ನೆರವಾಗುವಲ್ಲಿ ಮತ್ತೆ ವಿಫಲರಾದರು.
ರಾಹುಲ್ 24, ವಿರಾಟ್ ಕೊಹ್ಲಿ 36 ರನ್‌ಗಳಿಸಿದರು. ಉಳಿದಂತೆ ಶರ್ಮಾ 3, ಆಕಾಶ್ ದೀಪ್ ಶೂನ್ಯಕ್ಕೆ ಔಟಾದರು. ಸದ್ಯ ಪಂತ್ (6), ಜಡೇಜ (4) ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಬೊಲ್ಯಾಂಡ್ ತಲಾ 2 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಎಲ್ಲ ವಿಕೆಟ್‌ಗಳನ್ನು ಕಳೆದಕೊಂಡು ಮೊದಲ ಇನಿಂಗ್ಸ್‌ನಲ್ಲಿ 474 ರನ್ ಗಳಿಸಿದೆ. ಸ್ಟೀವ್ ಸ್ಮಿತ್ ಅವರು ಅಮೋಘ 140 ರನ್ ಸಿಡಿಸಿದರು.
ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 19 ವರ್ಷದ ಸ್ಯಾಮ್ 60, ಉಸ್ಮಾನ್ ಖ್ವಾಜಾ 57, ಮಾರ್ನಸ್ ಲಾಬುಷೇನ್ 72, ಪ್ಯಾಟ್ ಕಮಿನ್ಸ್ 49, ಅಲೆಕ್ಸ್ ಕ್ಯಾರಿ 31 ರನ್‌ಗಳಿಸಿದರು. ಈ ಮೂಲಕ ತಂಡದ ಮೊತ್ತ 400 ರನ್‌ಗಳ ಗಡಿ ದಾಟಲು ನೆರವಾದರು. ಟೆಸ್ಟ್ ಸರಣಿಯಲ್ಲಿ ಭಾರತದ ಪಾಲಿಗೆ ದೊಡ್ಡ ಸಮಸ್ಯೆಯಾಗಿದ್ದ ಟ್ರಾವಿಸ್ ಹೆಡ್ ಅವರನ್ನು ಜಸ್‌ಪ್ರೀತ್ ಬೂಮ್ರಾ ಶೂನ್ಯಕ್ಕೆ ಔಟ್ ಮಾಡಿದರು.
ಭಾರತದ ಪರ ಜಸ್‌ಪ್ರೀತ್ ಬೂಮ್ರಾ 4, ರವೀಂದ್ರ ಜಡೇಜ 3, ಆಕಾಶ್ ದೀಪ್ 2 ವಿಕೆಟ್ ಪಡೆದರು.
ಸ್ಕೋರ್...
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 474/10
ಭಾರತ ಮೊದಲ ಇನಿಂಗ್ಸ್: 164/5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.