ADVERTISEMENT

ಪೂಜಾರ ಶತಕ: ಬೃಹತ್‌ ಮೊತ್ತದತ್ತ ಭಾರತ

ಬಾಕ್ಸಿಂಗ್‌ ಡೇ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 2:12 IST
Last Updated 27 ಡಿಸೆಂಬರ್ 2018, 2:12 IST
ಪೂಜಾರ ಬ್ಯಾಟಿಂಗ್‌ ವೈಖರಿ
ಪೂಜಾರ ಬ್ಯಾಟಿಂಗ್‌ ವೈಖರಿ   

ಮೆಲ್ಬರ್ನ್‌: ಆಸ್ಟ್ರೇಲಿಯಾ ವಿರುದ್ಧದ ಮೂರನೇಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಬೃಹತ್‌ ಮೊತ್ತ ಕಲೆಹಾಕುವತ್ತ ಮುನ್ನಡೆದಿದೆ. ಸದ್ಯ 114 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 271ರನ್‌ ಗಳಿಸಿದ್ದು, ನಾಯಕ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಕ್ರೀಸ್‌ನಲ್ಲಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ ಜೊತೆ ಎರಡನೇ ದಿನ ಬ್ಯಾಟಿಂಗ್‌ ಮುಂದುವರಿಸಿದ ಚೇತೇಶ್ವರ ಪೂಜಾರ ವೃತ್ತಿ ಬದುಕಿನ 17ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಸರಣಿಯಲ್ಲಿ ಪೂಜಾರ ಗಳಿಸಿದ ಎರಡನೇ ಶತಕವಿದು. ತಾವೆದುರಿಸಿದ 280ನೇ ಎಸೆತದಲ್ಲಿ ಶತಕದ ರನ್‌ ಕದ್ದ ಅವರ ಇನಿಂಗ್ಸ್‌ನಲ್ಲಿ 10 ಸೊಗಸಾದ ಬೌಂಡರಿಗಳಿದ್ದವು. 178 ಎಸೆತಗಳಲ್ಲಿ 68 ರನ್‌ಗಳಿಸಿರುವ ಕೊಹ್ಲಿ ಇನ್ನೊಂದು ತುದಿಯಲ್ಲಿ ತಾಳ್ಮೆಯ ಆಟವಾಡುತ್ತಿದ್ದಾರೆ.

ಬಾಕ್ಸಿಂಗ್‌ ಡೇ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಪರ ಹನುಮ ವಿಹಾರಿ ಹಾಗೂ ಕನ್ನಡಿಗ ಮಯಾಂಕ್‌ ಅಗರವಾಲ್‌ ಇನಿಂಗ್ಸ್‌ ಆರಂಭಿಸಿದ್ದರು. ವಿಹಾರಿ 66 ಎಸೆತಗಳನ್ನು ಎದುರಿಸಿ 8 ರನ್‌ ಗಳಿಸಿದರೆ, ಮಯಾಂಕ್‌ 76 ರನ್‌ ಬಾರಿಸಿದ್ದರು.ಅಗರವಾಲ್‌ಗೆ ಇದು ಪದಾರ್ಪಣೆ ಪಂದ್ಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.