ADVERTISEMENT

Aus Vs Ind Boxing Day Test: ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟರ್‌ಗಳ ಮೇಲುಗೈ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2024, 7:29 IST
Last Updated 26 ಡಿಸೆಂಬರ್ 2024, 7:29 IST
<div class="paragraphs"><p>ವಿಕೆಟ್ ಕಿತ್ತ ಸಂಭ್ರಮದಲ್ಲಿ ಭಾರತದ ಆಟಗಾರರು</p></div>

ವಿಕೆಟ್ ಕಿತ್ತ ಸಂಭ್ರಮದಲ್ಲಿ ಭಾರತದ ಆಟಗಾರರು

   

– ಬಿಸಿಸಿಐ ಚಿತ್ರ

ಮೆಲ್ಬರ್ನ್: ಬಾಕ್ಸಿಂಗ್‌ ಡೇ ಟೆಸ್ಟ್‌ನ ಮೊದಲ ದಿನ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಮೇಲುಗೈ ಸಾಧಿಸಿದರು. ಭಾರತ ಬೌಲರ್‌ಗ ಮೇಲೆ ಸವಾರಿ ಮಾಡಿದ ಆಸೀಸ್, ಮೊದಲ ದಿನದಾಟ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್‌ ಪೇರಿಸಿದೆ. 3.62ರ ಸರಾಸರಿಯಲ್ಲಿ ಕಾಂಗರೂ ಬ್ಯಾಟರ್‌ಗಳು ರನ್‌ ಗುಡ್ಡೆ ಹಾಕಿದರು.

ADVERTISEMENT

ಪದಾರ್ಪಣೆ ಮಾಡಿದ 19 ವರ್ಷದ ಆರಂಭಿಕ ಆಟಗಾರ ಸಾಮ್ ಕೋನ್‌ಸ್ಟಾಸ್‌ ಹಾಗೂ ಉಸ್ಮಾನ್ ಖವಾಜ ಮೊದಲ ವಿಕೆಟ್‌ಗೆ 89 ರನ್ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ವೇಗವಾಗಿ ಆಡಿದ ಕೋನ್‌ಸ್ಟಾಸ್‌ ಭಾರತೀಯ ಬೌಲರ್‌ಗಳನ್ನು ದಂಡಿಸಿದರು. ಬೂಮ್ರಾ ಎಸೆತಗಳಿಗೆ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್ ಬಾರಿಸಿ ಹುಬ್ಬೇರಿಸಿದರು. ಕಲಾತ್ಮಕ ಹೊಡೆತಗಳ ಮೂಲಕ ಬೂಮ್ರಾ ಅವರ ಎಸೆತಗಳಲ್ಲಿ ರನ್ ಸೂರೆಗೈದರು.

ಕೋನ್‌ಸ್ಟಾಸ್‌ 65 ಎಸೆತಗಳಲ್ಲಿ 60 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಜಸ್ಪ್ರೀತ್ ಬೂಮ್ರಾ ಎಸೆತಕ್ಕೆ ರಿವರ್ಸ್ ಸ್ಕೂಪ್ ಮಾಡಿ ಗಮನ ಸೆಳೆಯಿತು. 92 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ರವೀಂದ್ರ ಜಡೇಜಾ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಖವಾಜ (57), ಲಾಬುಷೇನ್ (72), ಸ್ಟೀವನ್ ಸ್ಮಿನ್ ಅಜೇಯ (68) ಅರ್ಧ ಶತಕ ಬಾರಿಸಿದರು. ಕಳೆದೆರಡು ಪಂದ್ಯದಲ್ಲಿ ಭಾರತಕ್ಕೆ ತಲೆನೋವಾಗಿದ್ದ ಟ್ರಾವಿಸ್ ಹೆಡ್‌ ಅವರನ್ನು ಬೂಮ್ರಾ ಶೂನ್ಯಕ್ಕೆ ಬೌಲ್ಡ್ ಮಾಡಿದರು. ಮಿಚೆಲ್ ಮಾರ್ಷ್ 4 ಮತ್ತು ಅಲೆಕ್ಸ್ ಕ್ಯಾರಿ 31 ರನ್ ಗಳಿಸಿದರು.

ನಾಯಕ ಪಾಟ್ ಕಮಿನ್ಸ್ 8 ರನ್‌ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಬೂಮ್ರಾ 3, ವಾಷಿಂಗ್ಟನ್ ಸುಂದರ್, ಆಕಾಶ್‌ ದೀಪ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಕಿತ್ತರು.

ಈ ಪಂದ್ಯದಲ್ಲಿ ಭಾರತ ಎರಡು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದೆ. ಶುಭಮನ್ ಗಿಲ್ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.