
ಪಿಟಿಐ
ಆಯುಷ್ ಬಡೋನಿ
ಮುಂಬೈ: ದೆಹಲಿ ತಂಡದ ನಾಯಕ ಆಯುಷ್ ಬಡೋನಿ ಮತ್ತು ಬ್ಯಾಟರ್ ಪ್ರಿಯಾಂಶ್ ಆರ್ಯ ಅವರು ಮುಂಬೈ ಎದುರು ಗುರುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇವರಿಬ್ಬರೂ ಟಿ20 ವಿಶ್ವಕಪ್ ಸಿದ್ಧತಾ ಪಂದ್ಯಗಳನ್ನು ಆಡಲಿರುವ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬಡೋನಿ ಸ್ಥಾನದಲ್ಲಿ ಆಯುಷ್ ದೊಸೇಜಾ ಅವರು ಎಂಸಿಎ–ಬಿಕೆಸಿ ಮೈದಾನಲ್ಲಿ ನಡೆಯುವ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಬಡೋನಿ ಈಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡಕ್ಕೆ ಬುಲಾವ್ ಪಡೆದಿದ್ದರು.
ಭಾರತ ‘ಎ’ ತಂಡವು ಅಮೆರಿಕ ವಿರುದ್ಧ ನವಿ ಮುಂಬೈನಲ್ಲಿ ಫೆ. 2 ರಂದು ನಡೆಯಲಿರುವ ಅಭ್ಯಾಸ ಪಂದ್ಯ ಆಡಲಿದ್ದಾರೆ. ನಂತರ ತಂಡವು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ತೆರಳಲಿದ್ದು ಅಲ್ಲಿ ನಮೀಬಿಯಾ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.