ADVERTISEMENT

ಪಾಕ್‌ ಏಕದಿನ ಕ್ರಿಕೆಟ್‌ ತಂಡಕ್ಕೆ ಬಾಬರ್‌ ಸಾರಥ್ಯ

ಪಿಟಿಐ
Published 13 ಮೇ 2020, 21:07 IST
Last Updated 13 ಮೇ 2020, 21:07 IST
ಬಾಬರ್‌ ಅಜಂ
ಬಾಬರ್‌ ಅಜಂ   

ಕರಾಚಿ: ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನಾಯಕರಾಗಿ ಬಾಬರ್‌ ಅಜಂ ನೇಮಕಗೊಂಡಿದ್ದಾರೆ. ಟೆಸ್ಟ್‌ ತಂಡವನ್ನು ಅಜರ್‌ ಅಲಿ ಅವರೇ ಮುನ್ನಡೆಸಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬುಧವಾರ ಈ ವಿಷಯ ತಿಳಿಸಿದೆ.

ಸದ್ಯ ಟ್ವೆಂಟಿ–20 ಮಾದರಿಗೆ ನಾಯಕರಾಗಿರುವ ಬಾಬರ್‌ ಅವರು, ಸರ್ಫರಾಜ್‌ ಅಹಮದ್‌ ಅವರಿಂದ ತೆರವಾದ ಏಕದಿನ ತಂಡವನ್ನೂ ಮುನ್ನಡೆಸಲಿದ್ದಾರೆ. 2020–21ರ ಋತುವಿನಲ್ಲಿ ಪಾಕಿಸ್ತಾನ ತಂಡವು ಏಷ್ಯಾಕಪ್‌, ಟಿ20 ವಿಶ್ವಕಪ್‌ ಹೊರತುಪಡಿಸಿ ಆರು ಏಕದಿನ ಹಾಗೂ 20 ಟ್ವೆಂಟಿ–20 ಪಂದ್ಯಗಳನ್ನು ಆಡಬೇಕಿದೆ.

‘ನಾಯಕತ್ವ ಪಡೆದ ಅಜರ್‌ ಹಾಗೂ ಬಾಬರ್‌ ಅವರನ್ನು ಅಭಿನಂದಿಸುತ್ತೇನೆ. ಇದು ಸರಿಯಾದ ನಿರ್ಧಾರ. ತಂಡದ ಭವಿಷ್ಯದ ಕುರಿತು ಇವರು ಯೋಜನೆಗಳನ್ನು ರೂಪಿಸುವರು ಮತ್ತು ತಂಡಕ್ಕೆ ನಿರೀಕ್ಷಿತ ಯಶಸ್ಸು ತಂದುಕೊಡಬಲ್ಲರು’ ಎಂದು ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಕೋಚ್‌ ಮಿಸ್ಬಾ ಉಲ್‌ ಹಕ್‌ ಹೇಳಿದ್ದನ್ನು ಪಿಸಿಬಿ ಉಲ್ಲೇಖಿಸಿದೆ.

ADVERTISEMENT

2020–21ರ ಋತುವಿನಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯನ್ನೂ ಪಿಸಿಬಿ ಬುಧವಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.