ADVERTISEMENT

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯ: ಬಾಬರ್ ಆಜಂ ಶತಕ, ‍ಪಾಕ್‌ಗೆ ಜಯ

ಏಜೆನ್ಸೀಸ್
Published 9 ಜೂನ್ 2022, 19:32 IST
Last Updated 9 ಜೂನ್ 2022, 19:32 IST
ಬಾಬರ್ ಆಜಂ ಶತಕ ಸಂಭ್ರಮ  –ಎಪಿ ಚಿತ್ರ
ಬಾಬರ್ ಆಜಂ ಶತಕ ಸಂಭ್ರಮ  –ಎಪಿ ಚಿತ್ರ   

ಮುಲ್ತಾನ್:ನಾಯಕ ಬಾಬರ್ ಆಜಂ ಏಕದಿನ ಕ್ರಿಕೆಟ್‌ನಲ್ಲಿ 17ನೇ ಶತಕ ದಾಖಲಿಸಿದರು. ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ5 ವಿಕೆಟ್‌ಗಳಿಂದ ಜಯಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಶಾಯ್ ಹೋಪ್ (127) ಶತಕದ ಬಲದಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 305 ರನ್ ಗಳಿಸಿತು. ಅದಕ್ಕುತ್ತರವಾಗಿ ಪಾಕಿಸ್ತಾನ ತಂಡವು ಬಾಬರ್ (103; 107ಎ, 4X9) ಶತಕದ ಬಲದಿಂದ 49.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 306 ರನ್ ಗಳಿಸಿತು. ಇಮಾಮ್ ಉಲ್ ಹಕ್ ಮತ್ತು ಮೊಹಮ್ಮದ್ ರಿಜ್ವಾನ್ ಅರ್ಧಶತಕ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 50 ಓವರ್‌ಗಳಲ್ಲಿ 8ಕ್ಕೆ 305 (ಶಾಯ್ ಹೋಪ್ 127, ಶಾಮ್ರಾ ಬ್ರೂಕ್ಸ್‌ 70, ರೋವ್ಮನ್ ಪೊವೆಲ್ 32, ರೊಮೆರಿಯೊ ಶೆಫರ್ಡ್ 25, ಶಾಹೀನ್ ಆಫ್ರಿದಿ 55ಕ್ಕೆ2, ಹ್ಯಾರಿಸ್ ರವುಫ್ 77ಕ್ಕೆ4), ಪಾಕಿಸ್ತಾನ: 49.2 ಓವರ್‌ಗಳಲ್ಲಿ 5ಕ್ಕೆ306 (ಇಮಾಮ್ ಉಲ್ ಹಕ್ 66, ಬಾಬರ್ ಆಜಂ 103, ಮೊಹಮ್ಮದ್ ರಿಜ್ವಾನ್ 59, ಖುಷ್‌ದಿಲ್ ಶಾ ಔಟಾಗದೆ 41, ಅಲ್ಜರಿ ಜೋಸೆಫ್ 55ಕ್ಕೆ2) ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 5 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.