ADVERTISEMENT

ಶ್ರೀಲಂಕಾಗೆ ಮತ್ತೆ ಮಳೆ ಪಾಯಿಂಟ್

ಪಿಟಿಐ
Published 11 ಜೂನ್ 2019, 19:46 IST
Last Updated 11 ಜೂನ್ 2019, 19:46 IST
ಪಿಚ್ ಪರಿಶೀಲನೆ ನಡೆಸಿದ ಅಂಪೈರ್‌ಗಳಾದ ರಿಚರ್ಡ್‌ ಕೆಟಲ್‌ಬರೊ, ರಿಚರ್ಡ್‌ ಇಲ್ಲಿಂಗ್‌ವರ್ಥ್ ಮತ್ತು ಮೈಕೆಲ್ ಗೌ –ಎಎಫ್‌ಪಿ ಚಿತ್ರ
ಪಿಚ್ ಪರಿಶೀಲನೆ ನಡೆಸಿದ ಅಂಪೈರ್‌ಗಳಾದ ರಿಚರ್ಡ್‌ ಕೆಟಲ್‌ಬರೊ, ರಿಚರ್ಡ್‌ ಇಲ್ಲಿಂಗ್‌ವರ್ಥ್ ಮತ್ತು ಮೈಕೆಲ್ ಗೌ –ಎಎಫ್‌ಪಿ ಚಿತ್ರ   

ಬ್ರಿಸ್ಟಲ್: ಮಂಗಳವಾರ ಮಳೆ ಸುರಿದಿದ್ದರಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಪಂದ್ಯ ರದ್ದಾಯಿತು. ಉಭಯ ತಂಡಗಳಿಗೂ ತಲಾ ಒಂದು ಪಾಯಿಂಟ್ ನೀಡಲಾಯಿತು.

ಶ್ರೀಲಂಕಾ ತಂಡದ ಪಾಲಿಗೆ ಇದು ಎರಡನೇ ಮಳೆಯಾಟವಾಗಿದೆ. ಜೂನ್ 7ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು.

ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿವೆ. ತಲಾ ಒಂದರಲ್ಲಿ ಗೆದ್ದಿವೆ. ಬಾಂಗ್ಲಾ ದೇಶ ತಂಡವು ದಕ್ಷಿಣ ಆಫ್ರಿಕಾ ಎದುರು ಗೆದ್ದಿತ್ತು. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಎದುರಿನ ಪಂದ್ಯಗಳಲ್ಲಿ ಸೋತಿತ್ತು.

ADVERTISEMENT

ಅಂಪೈರ್‌ಗಳು ಮತ್ತು ರೆಫರಿ ಎರಡು ಬಾರಿ ಪಿಚ್ ತಪಾಸಣೆ ನಡೆಸಿದರು. ಕ್ರೀಡಾಂಗಣ ಸಿಬ್ಬಂದಿಯು ನೀರನ್ನು ಹೊರಗೆ ಹಾಕಲು ಬಹಳಷ್ಟು ಶ್ರಮಿಸಿದರು. ಮಧ್ಯಾಹ್ನದ ವೇಳೆಗೆ ನೀರು ಬಹಳಷ್ಟು ಪ್ರಮಾಣದಲ್ಲಿ ಇದ್ದ ಕಾರಣ, ಅಂಪೈರ್‌ಗಳು ಪಂದ್ಯವನ್ನು ರದ್ದು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.