ADVERTISEMENT

ಹಿತಾಸಕ್ತಿ ಸಂಘರ್ಷ: ರಾಹುಲ್ ದ್ರಾವಿಡ್ ನಿರಾಳ

ಪಿಟಿಐ
Published 14 ನವೆಂಬರ್ 2019, 19:45 IST
Last Updated 14 ನವೆಂಬರ್ 2019, 19:45 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು ಈಗ ನಿರಾಳರಾಗಿದ್ದಾರೆ.ಅವರ ವಿರುದ್ಧ ದಾಖಲಾಗಿದ್ದ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ದೂರನ್ನು ಬಿಸಿಸಿಐ ನೀತಿ ಅಧಿಕಾರಿ ಡಿ.ಕೆ. ಜೈನ್ ವಜಾ ಮಾಡಿದ್ದಾರೆ.

ಮಧ್ಯಪ್ರದೇಶಕ ಕ್ರಿಕೆಟ್ ಸಂಸ್ಥೆ (ಎಂಪಿಸಿಎ) ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ದ್ರಾವಿಡ್ ವಿರುದ್ಧ ದೂರು ನೀಡಿದ್ದರು. ಇಂಡಿಯಾ ಸಿಮೆಂಟ್ಸ್‌ನಲ್ಲಿ ದೊಡ್ಡ ಹುದ್ದೆಯಲ್ಲಿರುವ ರಾಹುಲ್ ಎನ್‌ಸಿಎ ಮುಖ್ಯಸ್ಥರಾಗಿದ್ದಾರೆ. ಅವರು ಎರಡು ಲಾಭದಾಯಕ ಹುದ್ದೆಗಳಲ್ಲಿ ಇರುವುದರಿಂದ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರು ನೀಡಿದ್ದರು. ಅದರಿಂದಾಗಿ ಜೈನ್ ಅವರು ದ್ರಾವಿಡ್ ಅವರನ್ನು ಎರಡು ಬಾರಿ ವಿಚಾರಣೆ ಮಾಡಿ ಮಾಹಿತಿ ಪಡೆದಿದ್ದರು.

‘ರಾಹುಲ್ ನೀಡಿರುವ ಸ್ಪಷ್ಟನೆಗಳು ತೃಪ್ತಿಕರವಾಗಿದೆ. ಆದ್ದರಿಂದ ದೂರನ್ನು ತಿರಸ್ಕರಿಸಿದ್ದೇವೆ. ದ್ರಾವಿಡ್ ಅವರು ಯಾವುದೇ ಹಿತಾಸಕ್ತಿ ಸಂಘರ್ಷದಲ್ಲಿ ಇಲ್ಲ’ಎಂದು ಜೈನ್ ಗುರುವಾರ ತಿಳಿಸಿದ್ದಾರೆ.

ADVERTISEMENT

ಇಂಡಿಯಾ ಸಿಮೆಂಟ್ಸ್‌ನಿಂದ ದೀರ್ಘ ರಜೆ (ಲೀವ್ ಆಫ್ ಅಬ್ಸೆನ್ಸ್‌) ಪಡೆದಿರುವುದಾಗಿ ನೀತಿ ಅಧಿಕಾರಿಗಳಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.