ADVERTISEMENT

ಎಸಿಸಿ ಕ್ಯಾಲೆಂಡರ್ ಏಕಪಕ್ಷೀಯ: ಸೇಥಿ ಅಸಮಾಧಾನ

ಪಿಟಿಐ
Published 5 ಜನವರಿ 2023, 19:45 IST
Last Updated 5 ಜನವರಿ 2023, 19:45 IST
ನಜಾಮ್ ಸೇಥಿ
ನಜಾಮ್ ಸೇಥಿ   

ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರು ಪ್ರಕಟಿಸಿರುವ ಎರಡು ವರ್ಷದ ಕ್ರಿಕೆಟ್ ವೇಳಾಪಟ್ಟಿಯು ಏಕಪಕ್ಷೀಯವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಾಮ್ ಸೇಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಯ್ ಶಾ ಅವರು ಗುರುವಾರ 2023 ಮತ್ತು 2024ರಲ್ಲಿ ಆಯೋಜಿಸಲಾಗಿರುವ ಕ್ರಿಕೆಟ್ ಟೂರ್ನಿಗಳ ಕ್ಯಾಲೆಂಡರ್‌ ಪ್ರಕಟಿಸಿದರು.

ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಲಾಗುವುದು. ಈ ಬಾರಿ ಪಾಕಿಸ್ತಾನವು ಟೂರ್ನಿಯ ಆತಿಥ್ಯವಹಿಸಲಿದೆ. ಆದರೆ ಭಾರತ ತಂಡವು ಪಾಕ್‌ ನಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಶಾ ಈ ಹಿಂದೆಯೇ ಹೇಳಿದ್ದರು.

ADVERTISEMENT

‘ಜಯ್ ಶಾ ಅವರೇ ತಾವು ಏಕಪಕ್ಷೀಯವಾಗಿ ಎಸಿಸಿ ರೂಪುರೇಷೆ ಮತ್ತು ಕ್ಯಾಲೆಂಡರ್‌ ಪ್ರಕಟಿಸಿರುವುದಕ್ಕೆ ಧನ್ಯವಾದಗಳು.2023ರ ಏಷ್ಯಾ ಕಪ್ ಟೂರ್ನಿಯ ಆತಿಥ್ಯವನ್ನು ಪಾಕ್ ವಹಿಸಲಿದೆ. ಆದರೆ ತಾವು ತಾವೇ ನಮ್ಮ ಪಿಎಸ್‌ಎಲ್ ಟೂರ್ನಿಯ ವೇಳಾಪಟ್ಟಿಯ ಬಗ್ಗೆಯೂ ತಾವೇ ನಿರ್ಧಾರ ಕೈಗೊಂಡಂತಿದೆ. ಇದಕ್ಕೆ ಶೀಘ್ರವೇ ಪ್ರತ್ರಿಕ್ರಿಯಿಸುವಿರೆಂದು ಆಶಿಸುವೆ’ ಎಂದು ಸೇಥಿ ಟ್ವೀಟ್ ಮಾಡಿದ್ದಾರೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಅರ್ಹತಾ ಸುತ್ತಿನಲ್ಲಿ ಗೆದ್ದ ತಂಡ ಆಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.