ADVERTISEMENT

ಮುಲಂಪುರ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಜಯ್ ಶಾ ಭೇಟಿ

ಪಿಟಿಐ
Published 1 ಡಿಸೆಂಬರ್ 2020, 15:27 IST
Last Updated 1 ಡಿಸೆಂಬರ್ 2020, 15:27 IST
ಚಂಡಿಗಡ ಸಮೀಪದ ಮೊಹಾಲಿಯಲ್ಲಿರುವ ಪಿಸಿಎ ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ  –ಪಿಟಿಐ ಚಿತ್ರ
ಚಂಡಿಗಡ ಸಮೀಪದ ಮೊಹಾಲಿಯಲ್ಲಿರುವ ಪಿಸಿಎ ಕ್ರೀಡಾಂಗಣಕ್ಕೆ ಮಂಗಳವಾರ ಭೇಟಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ  –ಪಿಟಿಐ ಚಿತ್ರ   

ಚಂಡಿಗಡ: ಪಂಜಾಬ್ ಕ್ರಿಕೆಟ್ ಸಂಸ್ಥೆಯು ಮುಲಂಪುರದಲ್ಲಿ ನಿರ್ಮಿಸಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭೇಟಿ ನೀಡಿದರು.

ಮೊಹಾಲಿಯಲ್ಲಿರುವ ಪಿಸಿಎ ಕ್ರೀಡಾಂಗಣದಿಂದ 20 ನಿಮಿಷಗಳ ಪ್ರಯಾಣ ಮಾಡಿದರೆ ಮುಲಂಪುರ ಕ್ರೀಡಾಂಗಣವಿದೆ. ಜಯ್ ಶಾ ಅವರೊಂದಿಗೆ ಪಿಸಿಎ ಅಧ್ಯಕ್ಷ ರಾಜೀಂದರ್ ಗುಪ್ತಾ ಮತ್ತು ಕಾರ್ಯದರ್ಶಿ ಪುನೀತ್ ಬಾಲಿ ಇದ್ದರು.

’ಹೊಸ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಶಾ ಅವರು ಸುಮಾರು 20 ನಿಮಿಷಗಳ ಕಾಲ ಪರಿಶೀಲಿಸಿದರು‘ ಎಂದು ಬಾಲಿ ತಿಳಿಸಿದರು.

ADVERTISEMENT

ಈ ಕ್ರೀಡಾಂಗಣವು ಪಂದ್ಯಗಳನ್ನು ಸಂಘಟಿಸಲು ಸಿದ್ಧವಾಗಿದೆ. ಇನ್ನೂ ಕೆಲವು ಸಣ್ಣಪುಟ್ಟ ಸೌಲಭ್ಯಗಳ ಅಭಿವೃದ್ಧಿ ಕೆಲಸವು ನಡೆಯುತ್ತಿದೆ. ಕೆಲವು ತಿಂಗಳುಗಳಲ್ಲಿ ಸಂಪೂರ್ಣವಾಗಲಿದೆ ಎಂದು ಬಾಲಿ ತಿಳಿಸಿದರು.

ಚಂಡಿಗಡದ ಸೆಕ್ಟರ್ 16ರಲ್ಲಿರುವ ಕ್ರೀಡಾಂಗಣಕ್ಕೆ ಶಾ ಅವರು ಸೋಮವಾರ ಭೇಟಿ ನೀಡಿದ್ದರು. ಯುಟಿಸಿಎ ನಿರ್ಮಿಸುತ್ತಿರುವ ಇನ್ನೊಂದು ಕ್ರಿಕೆಟ್ ಮೈದಾನಕ್ಕೂ ಶಾ ಮಂಗಳವಾರ ಭೇಟಿ ನೀಡಿದರು.

’ವಿಶ್ವದರ್ಜೆಯ ಕ್ರೀಡಾಂಗಣ, ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಡೆಹ್ರಾಡೂನ್ ಕ್ರೀಡಾಂಗಣ ಮತ್ತು ಮಸೂರಿ ಅಕಾಡೆಮಿಗಳು ಯುವ ಆಟಗಾರರ ತರಬೇತಿಗೆ ವೇದಿಕೆಯಾಗಲಿವೆ. ಬಿಸಿಸಿಐ ಮಾರ್ಗದರ್ಶನದಲ್ಲಿ ಈ ಕ್ರೀಡಾಂಗಣಗಳು ಉತ್ತಮವಾಗಿ ಬೆಳೆಯಲಿವೆ‘ ಎಂದು ಜಯ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.