ADVERTISEMENT

ಹಿಂದೆ ಸರಿದ ಡ್ರೀಮ್‌ 11: ಹೊಸ ಪ್ರಾಯೋಜಕರಿಗೆ ಬಿಸಿಸಿಐ ಹುಡುಕಾಟ

ಪಿಟಿಐ
Published 26 ಆಗಸ್ಟ್ 2025, 4:58 IST
Last Updated 26 ಆಗಸ್ಟ್ 2025, 4:58 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ‘ಡ್ರೀಮ್‌ 11’ ಫ್ಯಾಂಟಸಿ ಸ್ಪೋರ್ಟ್ಸ್‌ ಕಂಪನಿಯು ತನ್ನ ಒಪ್ಪಂದದಿಂದ ಹಿಂದೆ ಸರಿದ ಬೆನ್ನಲ್ಲೇ ಹೊಸ ಪ್ರಾಯೋಜಕರಿಗಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕಾಟ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. 

ಆನ್‌ಲೈನ್ ಜೂಜಾಟದ ಮೇಲೆ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ತನ್ನ ಗೇಮಿಂಗ್‌ ಚಟುವಟಿಕೆಗಳನ್ನು ನಿಲ್ಲಿಸಿರುವ ‘ಡ್ರೀಮ್‌ 11’ ಬಿಸಿಸಿಐ ಜೊತೆ ಮಾಡಿಕೊಂಡಿದ್ದ ₹381 ಕೋಟಿ ಮೌಲ್ಯದ ಒಪ್ಪಂದವನ್ನೂ ಮುರಿದಿದೆ.  

ದೇಶದ ಅತಿದೊಡ್ಡ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ‘ಡ್ರೀಮ್‌ 11’ ಕಂಪನಿ 2023ರ ಜುಲೈನಲ್ಲಿ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಹೀಗಾಗಿ, ಭಾರತ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳ ಆಟಗಾರರ ಜೆರ್ಸಿ ಮೇಲೆ ‘ಡ್ರೀಮ್‌ 11’ ಲೋಗೊ ಮುದ್ರಿಸಲಾಗಿತ್ತು. ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ಕೆಲ ಫ್ರ್ಯಾಂಚೈಸಿಗೂ ಪ್ರಾಯೋಜಕತ್ವ ನೀಡಿತ್ತು. 

ADVERTISEMENT

ಕಳೆದ ವಾರ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಸಂಸತ್ತು ಅಂಗೀಕರಿಸಿತು. ಅದರಂತೆ ಆನ್‌ಲೈನ್‌ ಗೇಮಿಂಗ್ ಆಡುವುದು ಮತ್ತು ಹಣಕಾಸು ಒದಗಿಸುವುದು ಅಪರಾಧವಾಗುತ್ತದೆ. ಅಪರಾಧಿಗಳಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅವಕಾಶ ಕಲ್ಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.