ADVERTISEMENT

ಮಹಿಳಾ ಟಿ20: ಕ್ವಾರ್ಟರ್‌ಫೈನಲ್‌ಗೆ ಕರ್ನಾಟಕ ತಂಡ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 20:10 IST
Last Updated 5 ಡಿಸೆಂಬರ್ 2025, 20:10 IST
ನಿಕಿ ಪ್ರಸಾದ್‌
ನಿಕಿ ಪ್ರಸಾದ್‌   

ಬೆಂಗಳೂರು: ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.

ಅಹಮದಾಬಾದ್‌ನಲ್ಲಿ ನಡೆದ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜ್ಯ ತಂಡವು ಬೌಲಿಂಗ್‌ ಆಯ್ದುಕೊಂಡಿತು. ಯೋಜನೆಗೆ ತಕ್ಕಂತೆ ಬೌಲಿಂಗ್‌ ದಾಳಿ ಮಾಡಿದ ದೀಕ್ಷಾ ಜೆ.ಎಚ್‌. (15ಕ್ಕೆ4) ಹಾಗೂ ನಮಿತಾ ಡಿಸೋಜಾ (5ಕ್ಕೆ2) ಅವರು ಪಂಜಾಬ್‌ ತಂಡದ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

ಹಿಮಾನ್ಶಿ ಸೈನಿ (ಔಟಾಗದೇ 51) ಅವರ ಹೋರಾಟದಿಂದ ಪಂಜಾಬ್‌ ತಂಡವು ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 95 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ರೋಷಿನಿ ಕಿರಣ್‌ ಬಳಗವು ನಿಕಿ ಪ್ರಸಾದ್‌ (ಔಟಾಗದೇ 44) ಅವರ ತಾಳ್ಮೆಯ ಬ್ಯಾಟಿಂಗ್‌ ಬಲದಿಂದ 19.5 ಓವರ್‌ಗಳಲ್ಲಿ 96 ರನ್‌ ಗಳಿಸಿ, ಗೆಲುವಿನ ನಗೆ ಬೀರಿತು.

ADVERTISEMENT

ಕರ್ನಾಟಕ ತಂಡವು ಭಾನುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು:

ಪಂಜಾಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 95 (ಹಿಮಾನ್ಶಿ ಸೈನಿ ಔಟಾಗದೇ 51; ದೀಕ್ಷಾ ಜೆ.ಎಚ್‌. 15ಕ್ಕೆ4, ನಮಿತಾ ಡಿಸೋಜಾ 5ಕ್ಕೆ2).

ಕರ್ನಾಟಕ: 19.5 ಓವರ್‌ಗಳಲ್ಲಿ 5 ವಿಕೆಟ್‌ಗೆ 96 (ನಿಕಿ ಪ್ರಸಾದ್‌ ಔಟಾಗದೇ 44; ಪ್ರಗತಿ ಸಿಂಗ್‌ 2ಕ್ಕೆ1, ಪ್ರಿಯಾಂಕ 12ಕ್ಕೆ1).

ಫಲಿತಾಂಶ: ಕರ್ನಾಟಕ ತಂಡಕ್ಕೆ 5 ವಿಕೆಟ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.