ADVERTISEMENT

ಬೆನ್ ಸ್ಟೋಕ್ಸ್‌ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿ

ಪಿಟಿಐ
Published 11 ಫೆಬ್ರುವರಿ 2026, 5:19 IST
Last Updated 11 ಫೆಬ್ರುವರಿ 2026, 5:19 IST
ಬೆನ್ ಸ್ಟೋಕ್ಸ್‌
ಬೆನ್ ಸ್ಟೋಕ್ಸ್‌   

ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರ ಕಣ್ಣಿಗೆ ಚೆಂಡು ಬಡಿದು ಗಾಯವಾಗಿತ್ತು.

34 ವರ್ಷದ ಆಲ್‌ರೌಂಡರ್ ಈ ಕುರಿತ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗಾಯವಾಗಿರುವ ಮತ್ತು ಊದಿಕೊಂಡಿರುವ ಬಲಗಣ್ಣು ಮತ್ತು ಕೆನ್ನೆಯ ಚಿತ್ರವನ್ನು ಹಂಚಿಕೊಂಡಿರುವ ಅವರು, ಇನ್ನುಮುಂದೆ ಇದು ಹೀಗೆ ಕಾಣದೇ ಇರಬಹುದು...ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಸ್ಟೋಕ್ಸ್ ಬರೆದುಕೊಂಡಿದ್ದಾರೆ.

ADVERTISEMENT

ಈ ತಿಂಗಳ ಆರಂಭದಲ್ಲಿ, ನನ್ನ ಮುಖಕ್ಕೆ ಚೆಂಡು ತಗುಲಿತ್ತು ಎಂದೂ ತಿಳಿಸಿದ್ದಾರೆ.

ಡರ್‌ಹ್ಯಾಮ್‌ನ ಒಳಾಂಗಣ ಕ್ರಿಕೆಟ್ ಕೇಂದ್ರದಲ್ಲಿ ಅಕಾಡೆಮಿ ಆಟಗಾರರಿಗೆ ತರಬೇತಿ ನೀಡುತ್ತಿದ್ದಾಗ ಅವರು ಗಾಯ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ 1-4 ಅಂತರದಲ್ಲಿಆ್ಯಷಸ್ ಸರಣಿ ಸೋತು ನಿರಾಸೆ ಅನುಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.