ADVERTISEMENT

IND vs ENG: ಗಾಯಾಳು ಬೆನ್ ಸ್ಟೋಕ್ಸ್ ಹೊರಕ್ಕೆ; ಆಂಗ್ಲರಿಗೆ ಹೊಸ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2025, 11:06 IST
Last Updated 30 ಜುಲೈ 2025, 11:06 IST
<div class="paragraphs"><p>ಬೆನ್ ಸ್ಟೋಕ್ಸ್</p></div>

ಬೆನ್ ಸ್ಟೋಕ್ಸ್

   

(ರಾಯಿಟರ್ಸ್ ಚಿತ್ರ)

ಲಂಡನ್: ಭಾರತ ವಿರುದ್ಧ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದೆ.

ADVERTISEMENT

ಗಾಯದ ಸಮಸ್ಯೆಗೆ ಒಳಗಾಗಿರುವ ಕಪ್ತಾನ ಬೆನ್ ಸ್ಟೋಕ್ಸ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಓಲಿ ಪೋಪ್ ಅವರಿಗೆ ನಾಯಕ ಪಟ್ಟ ವಹಿಸಿಕೊಡಲಾಗಿದೆ.

ಬೆನ್ ಸ್ಟೋಕ್ಸ್ ಬಲ ಭುಜದ ನೋವಿನಿಂದ ಬಳಲುತ್ತಿದ್ದು, ಆತಿಥೇಯ ತಂಡಕ್ಕೆ ಹಿನ್ನಡೆಯಾಗಿದೆ.

ತಂಡದಲ್ಲಿ ಒಟ್ಟು ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ಆಡಿರುವ ತಂಡದ ಪೈಕಿ ಬೌಲಿಂಗ್ ವಿಭಾಗದಲ್ಲಿ ಕ್ರಿಸ್ ವೋಕ್ಸ್ ಮಾತ್ರ ತಂಡದಲ್ಲಿದ್ದಾರೆ.

ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಹಾಗೂ ಜೋಶ್ ಟಂಗ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಮತ್ತು ಲಿಯಮ್ ಡಾಸನ್ ಅವಕಾಶ ವಂಚಿತರಾಗಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಓಲಿ ಪೋಪ್ ಜೊತೆಗೆ ಜಾಕ್ ಕ್ರಾಲಿ, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್ ಮತ್ತು ಜೇಮಿ ಸ್ಮಿತ್ ಬಲ ತುಂಬಲಿದ್ದಾರೆ.

ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಇಂತಿದೆ:

  • 1. ಜಾಕ್ ಕ್ರಾಲಿ

  • 2. ಬೆನ್ ಡಕೆಟ್

  • 3. ಓಲಿ ಪೋಪ್ (ನಾಯಕ)

  • 4. ಜೋ ರೂಟ್

  • 5. ಹ್ಯಾರಿ ಬ್ರೂಕ್

  • 6. ಜೇಕಬ್ ಬೆಥೆಲ್

  • 7. ಜೇಮಿ ಸ್ಮಿತ್ (ವಿಕೆಟ್ ಕೀಪರ್)

  • 8. ಕ್ರಿಸ್ ವೋಕ್ಸ್

  • 9. ಗಸ್ ಅಟ್ಕಿನ್ಸನ್

  • 10. ಜೇಮಿ ಓವರ್ಟನ್

  • 11. ಜೋಶ್ ಟಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.