
2025ರಲ್ಲಿ ಭಾರತ ಕ್ರಿಕೆಟ್ ತಂಡ ಟೆಸ್ಟ್ ಹೊರತುಪಡಿಸಿ, ಏಕದಿನ ಹಾಗೂ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇದರ ಹೊರತಾಗಿಯೂ, ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ ಮಾಡಿರುವ 2025ನೇ ಸಾಲಿನ ಅತ್ಯುತ್ತಮ ಟೆಸ್ಟ್ 11 ತಂಡದಲ್ಲಿ ನಾಲ್ವರು ಭಾರತದ ಆಟಗಾರರು ಸ್ಥಾನ ಪಡೆದಿದ್ದಾರೆ.
ವಿಶೇಷವಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕನ್ನಡಿಕ ಕೆ.ಎಲ್. ರಾಹುಲ್ ಅವರನ್ನು ಟ್ರಾವಿಸ್ ಹೆಡ್ ಜೊತೆ ಆರಂಭಿಕರಾಗಿ ಸ್ಥಾನ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ 12ನೇ ಆಟಗಾರನಾಗಿ ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೆ ಸ್ಥಾನ ನೀಡಲಾಗಿದೆ.
2025ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ದಕ್ಷಿಣ ಆಫ್ರಿಕಾಗೆ ಚೊಚ್ಚಲ ಐಸಿಸಿ ಟ್ರೋಪಿ ಗೆಲ್ಲಿಸಿಕೊಟ್ಟ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರನ್ನು 2025ರ ತಮ್ಮ ಅತ್ಯುತ್ತಮ ಟೆಸ್ಟ್ ತಂಡಕ್ಕೆ ನಾಯಕನನ್ನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ ಮಾಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ 2025ರ ಅತ್ಯುತ್ತಮ ಟೆಸ್ಟ್ 11
ಕೆ.ಎಲ್. ರಾಹುಲ್, ಟ್ರಾವಿಸ್ ಹೆಡ್, ಜೋ ರೂಟ್, ಶುಭಮನ್ ಗಿಲ್, ತೆಂಬಾ ಬವುಮಾ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಮಿಚೆಲ್ ಸ್ಟಾರ್ಕ್, ಜಸ್‌ಪ್ರೀತ್ ಬುಮ್ರಾ, ಸ್ಕಾಟ್ ಬೋಲ್ಯಾಂಡ್, ಸೈಮನ್ ಹಾರ್ಮರ್, ರವೀಂದ್ರ ಜಡೇಜ (12ನೇ ಆಟಗಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.